ಕಾರ್ಕಳ: ವಾಟ್ಸಪ್ಪ್ ನಲ್ಲಿ ಬಂದ RTO ಪಿಡಿಎಫ್ ತೆರೆಯಲು ಪ್ರಯತ್ನಿಸಿ 5.6 ಲಕ್ಷ ಕಳೆದುಕೊಂಡ ವ್ಯಕ್ತಿ

Prakhara News
0 Min Read

ಕಾರ್ಕಳ: ವ್ಯಕ್ತಿಯೊಬ್ಬರು ವಾಟ್ಸಪ್ಪ್ ನಲ್ಲಿ ಬಂದ RTO ಪಿಡಿಎಫ್ ಅನ್ನು ತೆರೆಯಲು ಹೋಗಿ 5.6 ಲಕ್ಷ ಕಳೆದುಕೊಂಡ ಘಟನೆ ಜೂ. 4 ರಂದು ಕಾರ್ಕಳದಲ್ಲಿ ನಡೆದಿದೆ.

ಪಿಡಿಎಫ್ ಮೊದಲಿಗೆ ತೆರೆಯದೆ ಇದ್ದು, ಬಳಿಕ ಹಲವಾರು ಬಾರಿ ಒಟಿಪಿ ಬಂದಿದೆ. ಇದಾದ ಬಳಿಕ ಹಂತ ಹಂತವಾಗಿ 5 ಲಕ್ಷದ 63 ಸಾವಿರದ 113 ರೂ. ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ.

ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment