ಫೆ.9-12: ಸುಳ್ಯದಿಂದ ಮುಲ್ಕಿವರೆಗೆ ದ.ಕ. ಕಾಂಗ್ರೆಸ್ನಿಂದ ಪಾದಯಾತ್ರೆ
ಮಂಗಳೂರು: ಕೇಂದ್ರ ಸರಕಾರವು ಮನ್ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು…
‘ನಮ್ಮಪ್ಪನೇ ಐದು ವರ್ಷ ರಾಜ್ಯದ ಮುಖ್ಯಮಂತ್ರಿ’ ಎಂದ ಯತೀಂದ್ರ,ಯತೀಂದ್ರ ರವರೆ ನಮ್ಮ ಹೈಕಮಾಂಡ್ ಎಂದ ಡಿಕೆಶಿ .
ಮಂಗಳೂರು : ‘ನಮ್ಮಪ್ಪನೇ ಐದು ವರ್ಷ ರಾಜ್ಯದ ಮುಖ್ಯಮಂತ್ರಿ’ ಎಂದು ಯತೀಂದ್ರ ಸಿದ್ದರಾಮಯ್ಯ ರವರು ಹೇಳಿಕೆ ನೀಡಿದ್ದು…
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಮುಖ್ಯಮಂತ್ರಿ ಕುರ್ಚಿ ಗೊಂದಲವೇ ಕಾರಣ – ನಳಿನ್ ಕುಮಾರ್ ಕಟೀಲ್
ಮಂಗಳೂರು : ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಾಲಿಕೆಯ ಚುನಾವಣೆ ರಾಜ್ಯ ಸರಕಾರ ಮಾಡದಿರಲು ಮುಖ್ಯ ಮಂತ್ರಿ…
ಕಾಂಗ್ರೆಸ್ ಪಕ್ಷದ ಪುಡಿ ರೌಡಿಗಳ ಬೀದಿ ಕಾಳಗಕ್ಕೆ ಕಡಿವಾಣ ಹಾಕಿ : ಉಡುಪಿ ನಗರ ಬಿಜೆಪಿ ಆಗ್ರಹ
ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿ ರಾತ್ರಿ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪುಡಿ ರೌಡಿಗಳಂತೆ ಪಾನಮತ್ತರಾಗಿ ಹೊಡೆದಾಡಿಕೊಂಡು…
ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ. ಚೌಟ
ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ…
ವಿಧಾನಮಂಡಲವನ್ನು ‘ಸುಳ್ಳಿನ ಕಾರ್ಖಾನೆ’ ಮಾಡಲು ಹೊರಟ ಕಾಂಗ್ರೆಸ್;ರಾಜ್ಯಪಾಲರನ್ನು ಅವಮಾನಿಸಿದ್ದು ಕೈ ಪಕ್ಷದ ಸೈದ್ಧಾಂತಿಕ ದಿವಾಳಿತನ, ಹತಾಶೆಯ ಪರಾಕಾಷ್ಠೆ -ಸಂಸದ ಕ್ಯಾ. ಚೌಟ
ಮಂಗಳೂರು: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿಯೇ ಘನವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಇಂದಿನ ಘಟನೆಯು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ…
ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ : ಸಂಸದ ಕ್ಯಾ. ಚೌಟ
ಮಂಗಳೂರು : ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಾಡಿಸಿರುವುದನ್ನು ವಿರೋಧಿಸಿರುವುದು ನೋಡಿದರೆ ಕಾಂಗ್ರೆಸ್ನವರ…
ಬ್ಯಾರಿ ಸಾಹಿತ್ಯ ಅಕಾಡೆಮಿ ಅಸ್ತಿತ್ವದಲ್ಲಿದೆಯೇ?” – ಕಾರ್ಯಚಟುವಟಿಕೆಗಳ ಸ್ಥಗಿತದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ;ಮಹಮ್ಮದ್ ಅಸ್ಗರ್
ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯು, ರಹೀಮ್ ಉಚ್ಚಿಲ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸದಾ…
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ನ ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್: ಶಾಸಕ ಸುನಿಲ್ ಕುಮಾರ್ ಟೀಕೆ
ಉಡುಪಿ: ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ…
ವಿಟ್ಲ: ಒಂದುಕೋಟಿ ರೂ ವೆಚ್ಚದ ಅಂಬೇಢ್ಕರ್ ಭವನಕ್ಕೆ ಶಿಲಾನ್ಯಾಸ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹೆಚ್ಚು ಅನುದಾನವನ್ನು ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು, ಕಾಂಗ್ರೆಸ್ ಸರಕಾರ ದಲಿತರ ಅಭಿವೃದ್ದಿಗೆ ಕಟಿಬದ್ದವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದ ಅಂಬೇಡ್ಕರ್ ಭವನಕ್ಕೆ ಸಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಈಗಾಗಲೇ ೭೫ ಲಕ್ಷ ಅನುದಾನ ಮಂಜೂರಾಗಿದೆ, ಮುಂದಿನ ದಿನಗಳಲ್ಲಿ ಬಾಕಿ ಅನುದಾನ ಬಿಡುಗಡೆಯಾಗಲಿದೆ. ಈ ಭಾಗದ ದಲಿತ ಸಮುದಾಯದ ಬಹಳ ವರ್ಷಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನದ ಕನಸನ್ನು ನನಸು ಮಾಡಲಾಗಿದೆ. ನೂತನವಾಗಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನ ದಲಿತ ಹಾಗೂ ಇತರೆ ಸಮುದಾಯದ ಕಾರ್ಯಗಳಿಗೂ ಬಳಕೆಯಾಗಲಿ ಎಂದು ಹೇಳಿದರು. ನೂತನ ಅಂಬೇಡ್ಕರ್ ಭವನಕ್ಕೆ ವಿಟ್ಲ ಪ್ರವಾಸಿ ಮಂದಿರದ ಬಳಿ ಜಾಗ ಕಾಯ್ದಿರಿಸಲಾಗಿದೆ ಆದರೆ ಈಜಾಗ ಅತ್ಯಂತ ಕಡಿಮೆಯಾಗಿದೆ, ಇಲ್ಲಿ ಭವನ ನಿರ್ಮಾಣವಾದರೆ ಪಾರ್ಕಿಂಗ್ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ಒಕ್ಕೆತ್ತೂರಿನಲ್ಲಿ ರುವ ಸರಕಾರಿ ಜಾಗದಲ್ಲಿ ನಿರ್ಮಾಣ ಮಾಡುವ ಬಗ್ಗೆ ಆಲೋಚನೆ ಇದ್ದು ಅಲ್ಲಿ ಜಾಗದ ಕೊರತೆ ಇದ್ದಲ್ಲಿ ನಿಗಧಿತ ಸ್ಥಳದಲ್ಲೇ ಭವನದ ನಿರ್ಮಾಣವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ರಮನಾಥ ವಿಟ್ಲ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ದಲಿತ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷ ಕರುಣಾಕರ್ ನಾಯಿತೊಟ್ಟು, ಶ್ರೀನಿವಾಸ್ ಶೆಟ್ಟಿ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್, ಶ್ರೀನಿವಾಸ್ ನಾಯಕ್, ಅಣ್ಣಪ್ಪ ಪುತ್ತೂರು, ಚಂಧ್ರಶೇಖರ, ಗೋಪಾಲ ನೇರಳಕಟ್ಟೆ, ಮೀನಾಕ್ಷಿ, ವಿಮಲ, ಮಂಜುಳಾ ಕೊಡಿಪ್ಪಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ಪಡಿಯಾರ್ ಮೊದಲಾದವರು ಉಪಸ್ಥಿತರಿದ್ದರು. ರಾಮಣ್ಣ ಪಿಲಿಂಜ ಸ್ವಾಗತಿಸಿ ವಂದಿಸಿದರು.


