ಮಣಿಪಾಲ: ಬಾಗಿಲು ಹಾಕದೆ ಮಲಗಿದ್ದ ಎಂಐಟಿ ವಿದ್ಯಾರ್ಥಿಯ ರೂಮಿನಿಂದ ₹1.30 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳವು..!

Prakhara News
1 Min Read

ಮಣಿಪಾಲ: ಪರೀಕ್ಷೆಗೆ ಓದಿಕೊಂಡು ಬಾಗಿಲು ಹಾಕದೆ ನಿದ್ದೆಗೆ ಜಾರಿದ್ದ ಎಂಐಟಿ (MIT) ವಿದ್ಯಾರ್ಥಿಯ ರೂಮಿಗೆ ನುಗ್ಗಿದ ಕಳ್ಳರು, ₹1.30 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಅಗತ್ಯ ದಾಖಲೆಗಳಿದ್ದ ಪರ್ಸ್ ದೋಚಿ ಪರಾರಿಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದವರಾದ ಸಾಗ್ನಿಕ್ ಬಸು (20) ಹಣ ಮತ್ತು ವಸ್ತುಗಳನ್ನು ಕಳೆದುಕೊಂಡ ವಿದ್ಯಾರ್ಥಿ. ಇವರು ಉಡುಪಿ ತಾಲ್ಲೂಕಿನ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿರುವ ‘ಶಾಂಭವಿ ಪ್ಯಾಲೇಸ್’ ವಸತಿ ಸಮುಚ್ಚಯದ ರೂಂ ನಂ. 604ಎ ರಲ್ಲಿ ವಾಸವಾಗಿದ್ದಾರೆ. ಕಳೆದ ನವೆಂಬರ್ 24ರಂದು ಸಾಗ್ನಿಕ್ ಬಸು ತಮ್ಮ ರೂಮಿನಲ್ಲಿ ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದರು. ಬಳಿಕ ಬೆಳಗಿನ ಜಾವ 4.30ರ ಸುಮಾರಿಗೆ ರೂಮಿನ ಬಾಗಿಲಿಗೆ ಚಿಲಕ ಹಾಕದೆ ಹಾಗೆಯೇ ಮಲಗಿದ್ದರು. ಬೆಳಿಗ್ಗೆ 7.30ಕ್ಕೆ ಎದ್ದು ನೋಡಿದಾಗ ಬಾಗಿಲು ತೆರೆದಿದ್ದು, ರೂಮಿನಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ವಸ್ತುಗಳ ವಿವರ: ₹1,00,000 ಮೌಲ್ಯದ ನೀಲಿ ಬಣ್ಣದ ಎಚ್‌ಪಿ ವಿಕ್ಟಸ್ (HP Victus) ಲ್ಯಾಪ್‌ಟಾಪ್
₹30,000 ಮೌಲ್ಯದ ಕಪ್ಪು ಬಣ್ಣದ ಒನ್‌ಪ್ಲಸ್ 11ಆರ್ (OnePlus 11R) ಮೊಬೈಲ್ ಫೋನ್
ವೈಲ್ಡ್‌ಕ್ರಾಫ್ಟ್ (Wildcraft) ಬ್ಯಾಗ್
ಪರ್ಸ್ ಹಾಗೂ ಅದರಲ್ಲಿದ್ದ ಪ್ರಮುಖ ದಾಖಲಾತಿಗಳು.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share This Article
Leave a Comment