ಬೋಂದೆಲ್‌ನಲ್ಲಿ ಶೀಘ್ರವೇ ರಂಗಮಂದಿರ ಕಾಮಗಾರಿ ಆರಂಭ: ಸಚಿವ ಯು.ಟಿ.ಖಾದರ್

Prakhara News
0 Min Read

ಮಂಗಳೂರು : ಜಿಲ್ಲೆಯ ಕಲಾಭಿಮಾನಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಕಲಾಮಂದಿರವನ್ನು ನಗರದ ಬೋಂದೆಲ್‌ನಲ್ಲಿ 8.17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಇದರ ಟೆಂಡ‌ರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಭಿಮಾನಿಗಳು, ಸಾಹಿತಿಗಳ ಬೇಡಿಕೆಯಂತೆ ಕಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು ಎಂದರು.

Share This Article
Leave a Comment