ಪುತ್ತೂರು: ನಾನು ಅಹಂಕಾರದಿಂದ ಈ ಕಾರ್ಯಕ್ರಮ ಮಾಡುತ್ತಿಲ್ಲ, ಕಳೆದ ೧೪ರ್ಷದಿಂದ ಪ್ರತೀ ದೀಪಾವಳಿಯಂದು ತನ್ನ ಸ್ವಂತ ಉದ್ಯಮದಿಂದ ಒಂದಿಷ್ಟು ಪಾಲನ್ನು ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತಿದ್ದೇನೆ, ನನಗೆ ಎಷ್ಟು ದಿನ ದೇವರು ಈ ಕೆಲಸ ಮಾಡಲು ಶಕ್ತಿ ನೀಡುತ್ತಾನೋ ಅಷ್ಟು ವರ್ಷ ನೀಡುತ್ತೇನೆ, ಅಶೋಕ ಜಮನ ಕಾರ್ಯಕ್ರಮಕ್ಕೆ ಬಂದು ನಮ್ಮನ್ನು ಆಶೀರ್ವದಿಸಿದರೆ ಅದುವೇ ನನಗೆ ನೀವು ಕೊಡುವ ದೊಡ್ಡ ಮಟ್ಟದ ಶಕ್ತಿಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ ಪೂರ್ವಸಿದ್ದತಾ ಸಭೆ ಹಾಗೂ ವಿವಿಧ ಸಮಿತಿಯ ಸದಸ್ಯರ ಜೊತೆ ನಡೆದ ಪ್ರಮುಖ ಸಭೆಯಲ್ಲಿ ಮಾತನಾಡಿದರು.

ನ.೨೨ ರಂದು ಬೆಳಿಗ್ಗೆ ೯.೩೦ ರಿಂದ ಅಶೋಕ ಜನಮನ ಕಾರ್ಯಕ್ರಮ ಆರಂಭವಾಗುತ್ತದೆ. ಬರುವ ಎಲ್ಲಾ ಸಾರ್ವಜನಿಕರು ನಮ್ಮ ಅತಿಥಿಯಾಗಿರುತ್ತಾರೆ, ಬಂದವರನ್ನು ಕಾಯಿಸುವ ಪ್ರಶ್ನೆಯೇ ಇಲ್ಲ ಬೆಳಿಗ್ಗೆ ಬಂದವರಿಗೆ ಬೆಳಿಗ್ಗಿನ ಉಪಹಾರ ಸೇವನೆ ಮಾಡಿ ಉಡುಗೋರೆಯನ್ನು ಪಡೆದುಕೊಂಡು ತೆರಳಬಹುದು, ಮಧ್ಯಾಹ್ನ ಬಂದವರು ಊಟ ಮಾಡಿ ತೆರಳಬಹುದು ಸಂಜೆ ಬಂದವರು ಸಂಜೆಯ ಉಪಹಾರ ಸೇವಿಸಿ ಉಡುಗೋರೆ ಪಡೆದು ತೆರಳಬಹುದು ಎಂದು ಶಾಸಕರು ತಿಳಿಸಿದರು. ನ.೮ ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಿದ್ದು, ಮಳೆ ಬಂದರೆ ಜನರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಮುಂದೂಡಿದ್ದೇವೆ, ನಿಮಗಾಗಿಯೇ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಒಂದು ಲಕ್ಷ ಮಂದಿಯ ನಿರೀಕ್ಷೆ:
ಅಶೋಕ ಜಮನ ಕಾರ್ಯಕ್ರಮಕ್ಕೆ ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಬಂದ ಎಲ್ಲರಿಗೂ ಊಟ , ಉಪಹಾರದ ಜೊತೆಗೆ ಉಡುಗೋರೆಯನ್ನು ವಿತರಿಸಲಾಗುತ್ತದೆ. ತಟ್ಟೆ, ಟವೆಲ್, ಬೆಡ್ ಶೀಟ್ ಹಾಗೂ ಸಾರಿ ಈ ಮೂರಲ್ಲಿ ಯಾವುದಾದರು ಒಂದನ್ನು ಪಡೆಯಬಹುದಾಗಿದೆ., ಉತ್ತಮ ಗುಣಮಟ್ಟದ ಉಡುಗೋರೆಯನ್ನು ವಿತರಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು. ಈಗಾಗಲೇ ಗ್ರಾಮ ಮಟ್ಟಕ್ಕೆ ತೆರಳಿ ಗ್ರಾಮಸ್ಥರನ್ನು ಆಮಂತ್ರಿಸುವ ಕೆಲಸವನ್ನು ಟ್ರಸ್ಟ್ ಸದಸ್ಯರು ಮಾಡುತ್ತಿದ್ದಾರೆ. ಆಮಂತ್ರಣ ಸಿಗದವರು ಇದುವೇ ಆಮಂತ್ರಣ ಎಂದು ತಿಳಿದು ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಅಪಪ್ರಚಾರಗಳಿಗೆ ಕಿವಿಗೊಡಬೇಡಿ:
ಕೆಲವರು ಬಡವರಿಗೆ ನೆರವು ನೀಡುವುದನ್ನು ಕಂಡು ಸಹಿಸಲಾಗದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೇದ ವರ್ಷ ಹಾಗೆ ಆಗಿದೆ, ಹೀಗೆ ಆಗಿದೆ ಎಂದು ಬೆದರಿಸುವ ದುಷ್ಟರ ಕೂಟವೊಂದು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಅಪಪ್ರಚಾರ ಮಾಡುವವರೂ ಬಡವರಿಗೆ ಏನಾದರೂ ಕಿಂಚಿತ್ತು ಸಹಾಯ ಮಾಡುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ, ಅವರಿಗೆ ದೇ ವರು ಸದ್ಬುದ್ದಿಯನ್ನು ಕರುಣಿಸಲಿ ಎಂದು ಹೇಳಿದರು.
ಎಲ್ಲಾ ಸಿದ್ದತೆಗಳು ಅಂತಿಮ ಹಂತದಲ್ಲಿ: ಸುದೇಶ್ ಶೆಟ್ಟಿ
ಅಶೋಕ ಜನಮನ ಕಾರ್ಯಕ್ರಮದ ಚಪ್ಪರ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ,ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಊಟದ ವ್ಯವಸ್ಥೆಗೆ ಪ್ರತ್ಯೇಕ ಸ್ಥಳ, ಉಡುಗೋರೆ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ, ಹಿರಿಯ ನಾಗರಿಕರಿಗೆ, ಅಶಕ್ತರಿಗೆ ವಿಶೇಷ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳ ಸಿದ್ದತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗ್ರಾಮಗಳಿಗೆ ತೆರಳಿ ಆಮಂತ್ರಿಸುವ ಕೆಲಸವೂ ನಡೆಯುತ್ತಿದೆ, ಪ್ರಚಾರ, ಪ್ರಸಾರ ಕೆಲಸವು ನಿತ್ಯ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಮಂದಿ ಸೇರುವ ನಿರೀಕ್ಷೆ ಇದೆ. ಎಷ್ಟೇ ಜನ ಬಂದರೂ ಅವರನ್ನು ಸುದಾರಿಸುವ ಎಲ್ಲಾ ವ್ಯವಸ್ಥೆಗಳು ಸಿದ್ದಗೊಂಡಿದೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಸುಮಾ ಅಶೋಕ್ ರೈ, ಮಹಮ್ಮದ್ ಬಡಗನ್ನೂರು,ಡಾ. ರಾಜಾರಾಂ ಕೆ ಬಿ, ಮುರಳೀದರ್ ರೈ ಮಟಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಯು ಟಿ ತೌಸೀಫ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಶೆಟ್ಟಿ ಪುತ್ತೂರು, ನಿಹಾಲ್ ಪಿ ಶೆಟ್ಟಿ ಸಾಮೆತ್ತಡ್ಕ, ಯೋಗೀಶ್ ಸಾಮಾನಿ ರಾಧಾಕೃಷ್ಣ ನಾಯ್ಕ್, ರಾಮಣ್ಣ ಪಿಲಿಂಜ ಉಪ್ಪಿನಂಗಡಿ ಸೇರಿದಂತೆ ಟ್ರಸ್ಟ್ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.


