ಮಾಣಿಲ ಶ್ರೀಧಾಮದಲ್ಲಿ ಅ.11ರಿಂದ ಶರನ್ನವರಾತ್ರಿ ಉತ್ಸವ

Prakhara News
2 Min Read

ಬಂಟ್ವಾಳ : ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮದಲ್ಲಿ 27ನೇ ವರ್ಷದ ಶರನ್ನವರಾತ್ರಿ ಉತ್ಸವ ಅ.11ರಿಂದ 23ರವರೆಗೆ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶರನ್ನವರಾತ್ರಿ ಉತ್ಸವವು ವೇದ ಮೂರ್ತಿ ಗಣಪತಿ ಭಟ್‌ ಬಾಕಿಲಪದವು ಇವರ ವೈದಿಕತ್ವದಲ್ಲಿ ಜರಗಲಿರುವುದು.

ಅ.11ರಂದು ಬೆಳಗ್ಗೆ 5.30ರಿಂದ ದ್ವಾದಶ ನಾಳಿಕೇರ ಅಷ್ಟದ್ರವ್ಯದಿಂದ ಗಣಹೋಮ ಹಾಗೂ ಬೆಳಗ್ಗೆ 6.30ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ.
11-10-2026 ರಿಂದ 21-10-2026ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಪಂಚಾಮೃತಾಭಿಷೇಕ, ಕುಂಭೇಶ್ವರೀ ಪೂಜೆ, ಗುರುಪೂಜೆ, ಗೋಪೂಜೆ ಹಾಗೂ ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ ನೆರವೇರಲಿದೆ.ಬೆಳಗ್ಗೆ 9.30ರಿಂದ ಚಂಡಿಕಾಯಾಗ,ಬೆಳಗ್ಗಿನಿಂದ ಸಂಜೆ ತನಕ ಭಜನಾ ಸಂಕೀರ್ತನೆ ನಡೆಯಲಿದ್ದು 11 ಗಂಟೆಗೆ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಮಧ್ಯಾಹ್ನ 11-30ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ ನಡೆಯಲಿದೆ.

12-30 ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ 2ರಿಂದ ವಿದುಷಿ ಉಮಾ ವಿಷ್ಣು ಹೆಬ್ಬಾರ್ ಅವರ ನೇತೃತ್ವದಲ್ಲಿ ಭಾರತಿ ನೃತ್ಯಾಲಯ, ಮುಡಿಪು ಇದರ ವಿದ್ಯಾರ್ಥಿಗಳಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ ನಡೆಯಲಿದೆ.ಸಂಜೆ 5-30ಕ್ಕೆ ದೀಪ ಪ್ರತಿಷ್ಠೆ, ದುರ್ಗಾನಮಸ್ಕಾರ ಪೂಜೆ ಹಾಗೂ ಲಲಿತಾಸಹಸ್ರನಾಮಾರ್ಚನೆ ನಡೆಯಲಿದ್ದು, ರಾತ್ರಿ 7-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ವಿಶೇಷ ಕಾರ್ಯಕ್ರಮಗಳು
ಅ.15ರಂದು ಲಲಿತಾ ಪಂಚಮಿ ಹಾಗೂ ಲಲಿತಾ ಯಾಗ, ಅ.17ರಂದು ಶಾರದಾ ಪೂಜಾರಂಭ ಹಾಗೂ ಸರಸ್ವತೀ ಯಾಗ, ಅ.20ರಂದು ಮಹಾನವಮಿ ಹಾಗೂ ಆಯುಧ ಪೂಜೆ, ಅ.21ರಂದು ವಿಜಯದಶಮಿ ವಿಶೇಷವಾಗಿ ಆಚರಿಸಲಾಗುತ್ತದೆ.

ಅ.22ರಂದು ಬೆಳಗ್ಗೆ 6.30ರಿಂದ ಗಣಹೋಮ, ಪಂಚಾಮೃತಾಭಿಷೇಕ, ಕುಂಭೇಶ್ವರೀ ಪೂಜೆ, ಗುರುಪೂಜೆ, ಗೋಪೂಜೆ ಹಾಗೂ ನಾಗದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ಬೆಳಗ್ಗೆ 9ರಿಂದ ದತ್ತಯಾಗ, ಧನ್ವಂತರಿ ಹೋಮ ಹಾಗೂ ಚಂಡಿಕಾಯಾಗ ನೆರವೇರಲಿದ್ದು, 11 ಗಂಟೆಗೆ ಯಾಗದ ಪೂರ್ಣಾಹುತಿ ನಡೆಯಲಿದೆ.

11-30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಈ ಸಂದರ್ಭದಲ್ಲಿ ವೀರಯೋಧ ಶ್ರೀ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಪೆರವಾಯಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 11.30ಕ್ಕೆ ಪೂಜ್ಯ ಶ್ರೀಗಳವರಿಂದ ಮಧುಕರಿ ಮಹಾಪೂಜೆ ಹಾಗೂ ಧಾರ್ಮಿಕ ಸಭೆ, ಮಧ್ಯಾಹ್ನ 1ಕ್ಕೆ ಸ್ವರ್ಣ ಮಂತ್ರಾಕ್ಷತೆ ಮತ್ತು ಮಹಾಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಗೀತಾ ನೃತ್ಯಾಲಯ, ಜೋಡುಸ್ಥಾನದ ವಿದೂಷಿ ಚೈತ್ರ ಭಟ್ ಅವರ ಶಿಷ್ಯವೃ೦ದದಿ೦ದ ‘ನಾಟ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ.

ಸಂಜೆ 4ರಿಂದ ಭಜನಾ ಸಂಕೀರ್ತನೆ, ಸಂಜೆ 5-30 ರಿಂದ ದೀಪಾರಾಧನೆ, ದುರ್ಗಾನಮಸ್ಕಾರ ಪೂಜೆ, ಲಲಿತಾಸಹಸ್ರನಾಮಾರ್ಚನೆ ಹಾಗೂ ಅಷ್ಟಾವದಾನ ಸೇವೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಬಳಿಕ ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ‘ಬ್ರಹ್ಮಕಪಾಲ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಅ.23 ರಂದು ಪ್ರಾತಃ ಕಾಲ ಸೀಯಾಳ ಅಭಿಷೇಕ ಹಾಗೂ ನಾಗತಂಬಿಲ ನಡೆಯಲಿದೆ.

Share This Article
Leave a Comment