ಉಪ್ಪಿನಂಗಡಿ : ಉಪ್ಪಿನಂಗಡಿ ಗಣೇಶೋತ್ಸವದ ವೇಳೆ ಗಣಪತಿ ಮೂರ್ತಿ ವಿಸರ್ಜನೆ ವೇಳೆ ವಂದೇ ಮಾತರಂ ಗಾಯನವನ್ನು ಎರಡೇ ಚರಣಗಳಿಗೆ ನಿಲ್ಲಿಸುವಂತೆ ಎಸ್ಐ ಆಗ್ರಹಿಸಿದ್ದರಿಂದ ಕೆಲ ಕಾಲ ಉದ್ವಿಗ್ನದ ಪರಿಸ್ಥಿತಿ ಉಂಟಾದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆಯಿತು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ನಿಂದ 50ನೇ ವರ್ಷದ ಗಣೇಶೋತ್ಸವ ನಡೆಯಿತು. ಗಣಪತಿ ವಿಸರ್ಜನೆ ಮೊದಲು ವಂದೇ ಮಾತರಂ ಧ್ವನಿ ಮುದ್ರಿತ ಗಾಯನವನ್ನು ಮೊಳಗಿಸಲಾಯಿತು. ಇದೇ ವೇಳೆ ಉಪ್ಪಿನಂಗಡಿ ಎಸ್ಐ ಸುತೇಶ್, ಗಾಯನ ನಿಲ್ಲಿಸಿದರು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.
ಬಳಿಕ ವಂದೇ ಮಾತರಂ ಪೂರ್ಣ ಹಾಡಲು ಭಕ್ತರು ಪಟ್ಟು ಹಿಡಿದರು. ಇದರಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಎಸ್ಐ ಪೂರ್ಣ ಗಾಯನಕ್ಕೆ ಅನುಮತಿ ಕೊಟ್ಟರು. ಬಳಿಕ ಪೂರ್ತಿಯಾದ ನಂತರ ಜಲಸ್ತಂಬನ ವಿಧಿ ವಿಧಾನಗಳೊಂದಿಗೆ ನೆರವೇರಿತು.


