ಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನ, ಸಂಕಷ್ಟದಲ್ಲಿದ್ದೇನೆ: ಕೇರಳ ಮಹಿಳಾ ಟ್ರಾವೆಲ್ ವ್ಲಾಗರ್ ಪೋಸ್ಟ್; ಅಸಲಿಗೆ ಆಗಿದ್ದೇನು?

Prakhara News
2 Min Read

ಕೊಚ್ಚಿ: ಅಫ್ಗಾನಿಸ್ತಾನದಲ್ಲಿದ್ದು ಹಲವು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳಂನ ಜನಪ್ರಿಯ ಮಹಿಳಾ ಟ್ರಾವೆಲ್ ವ್ಲಾಗರ್ ಒಬ್ಬರು, ತಾವು ಬಾಮಿಯಾನ್‌ನಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದೇನೆ ಎಂದು ಸೋಮವಾರ(ಸೆ.14) ಹೇಳಿಕೊಂಡಿದ್ದು, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಹಾಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ‘ಬ್ಯಾಕ್‌ಪ್ಯಾಕರ್ ಅರುಣಿಮಾ’ ಎಂದು ಗುರುತಿಸಿಕೊಂಡಿರುವ ಕೇರಳದ ಮಹಿಳಾ ಟ್ರಾವೆಲ್​ ಬ್ಲಾಗರ್​, ಫೇಸ್‌ಬುಕ್ ಪುಟದ ಪೋಸ್ಟ್‌ನಲ್ಲಿ ಸ್ಥಳೀಯ ಅಧಿಕಾರಿಗಳಿಂದ ಬಂದಿದೆ ಎನ್ನಲಾದ ಅಧಿಕೃತ ಸಂವಹನದ ಅನುವಾದವನ್ನು ಅವರು ಹಂಚಿಕೊಂಡಿದ್ದು, ನಾನು ಅಫ್ಗಾನಿಸ್ತಾನದಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದು, ಸಂಕಷ್ಟದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಬಮ್ಯಾನ್​ ಪ್ರಯಾಣದಲ್ಲಿ ಈ ದೇಶದ ಕಾನೂನಿನ ಪ್ರಕಾರ, ಮಹಿಳೆಯೊಬ್ಬರು ಏಕಾಂಗಿಯಾಗಿ, ಪುರುಷ ಸಂಗಾತಿ ಅಥವಾ ಗೈಡ್​ ಇಲ್ಲದೇ ಮಹಿಳೆಯರು ಪ್ರಯಾಣಿಸುವಂತಿಲ್ಲ ಎಂದ ಅಧಿಕಾರಿಗಳು ತಿಳಿಸಿದರು. ಈ ಹಿಂದೆ ಕೂಡ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಕಾರಣಕ್ಕಾಗಿ ಜಲಾಲಾಬಾದ್‌ನಲ್ಲಿ ಅನುಮತಿ ನಿರಾಕರಿಸಲಾಗಿತ್ತು ಎಂದೂ ತಿಳಿಸಿದ್ದಾರೆ.

ಆ ಘಟನೆ ವಿವರಿಸಿದ ಅವರು, ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬಮ್ಯಾನ್‌ಗೆ ತಲುಪಿದಾಗ ತಮ್ಮ ಪಾಸ್‌ಪೋರ್ಟ್, ವೀಸಾ ಮತ್ತು ಪರವಾನಗಿಯ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದರು. ಅವರ ಪ್ರಕಾರ, ಪರವಾನಗಿ ಪಡೆಯಬೇಕು. ಹಾಗೇ ಗೈಡ್ ಜೊತೆಗೆ ಪ್ರಯಾಣಿಸಬೇಕು ಎಂದು ಪಟ್ಟು ಹಿಡಿದರು ಎಂದು ತಿಳಿಸಿದ್ದಾರೆ.

ಆಗಸ್ಟ್ 27 ರಿಂದ ಅಫ್ಘಾನಿಸ್ತಾನ ಪ್ರವಾಸ ಮಾಡುತ್ತಿದ್ದು, ಅಲ್ಲಿನ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಫ್ಘಾನಿಸ್ತಾನದ ನಿಯಮದ ಪ್ರಕಾರ, ನಾನು ನಿಯಮವನ್ನು ಉಲ್ಲಂಘಿಸಿದ್ದು, ಅವರು ನನಗೆ ಬಂಧಿಸುವುದಾಗಿ ತಿಳಿಸಿದರು. ತಕ್ಷಣಕ್ಕೆ ನಾನು ಏನಾಯಿತು ಎಂಬ ಕುರಿತು ನನ್ನ ಸ್ನೇಹಿತನಿಗೆ ತಿಳಿಸಿದೆ. ನನ್ನ ಕೈಕಾಲುಗಳು ನಡುಗಲು ಶುರುವಾಯಿತು. ಏನು ಮಾಡಬೇಕು ಎಂಬುದು ತಿಳಿಯದಂತೆ ಆಯಿತು. ಇದೇ ಸಮಯದಲ್ಲಿ, ಗೂಗಲ್​ ಟ್ರಾನ್ಸ್​ಲೇಟ್​ ಮೂಲಕ ಅವರನ್ನು ಸಂಪರ್ಕಿಸುವ ಯತ್ನ ನಡೆಸಿದೆ. ನನ್ನನ್ನು ಗಡಿಪಾರು ಮಾಡುವಂತೆ ಕೋರಿದೆ. ಅವರು ನಿಯಮ ಉಲ್ಲಂಘಿಸಿದ ಕಾರಣ ಬಂಧಿಸುವುದಾಗಿ ಹೇಳಿದರು ಎಂದು ತಿಳಿಸಿದ್ದಾರೆ

ಇಲ್ಲಿನ ಕಾನೂನು ಉಲ್ಲಂಘಿಸಿದ ಘಟನೆ ತಿಳಿದು ಸಾಕಷ್ಟು ಹೆದರಿಕೆ ಆಯಿತು. ತಕ್ಷಣಕ್ಕೆ ನನಗೆ ಬಮ್ಯಾನ್​ಗೆ ತಲುಪಲು ಸಹಾಯ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದೆ. ಆತ ನನ್ನ ಪರವಾಗಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಈ ಚರ್ಚೆಯ ಬಳಿಕ ಅವರು ಮುಂದಿನ ದೇಶಕ್ಕೆ ಪ್ರಯಾಣ ಬೆಳೆಸಲು ಅನುಮತಿ ನೀಡಿದರು. ನಾನು ಮಹಿಳೆಯಾದ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗೆ ಒಳಗಾಗುವಂತೆ ಆಯಿತು ಎಂದಿದ್ದಾರೆ.

Share This Article
Leave a Comment