ಸವದತ್ತಿಯಲ್ಲಿ ಜಮೀನು ಕೆಲಸದ ವೇಳೆ ಕೂಲಿ ಕಾರ್ಮಿಕರಿಗೆ ನಿಧಿ ಪತ್ತೆ..!

Prakhara News
1 Min Read

ಬೆಳಗಾವಿ: ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಜಮೀನು ಅಭಿವೃದ್ಧಿ ಕಾಮಗಾರಿ ವೇಳೆ ಅಗೆಯುತ್ತಿದ್ದಾಗ ಗಂಗರ ಕಾಲದ ಚಿನ್ನದ  ನಿಧಿ ಪತ್ತೆಯಾಗಿದೆ.

ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವಾಗ ಗಡಿಗೆಯಲ್ಲಿ 14‌ ಚಿನ್ನದ ನಾಣ್ಯಗಳು ಕಾರ್ಮಿಕರಿಗೆ ಸಿಕ್ಕಿವೆ. ಸುಮಾರು 54.8 ಗ್ರಾಂ ತೂಕದ 8.27 ಲಕ್ಷ ರೂ. ಮೌಲ್ಯದ ನಾಣ್ಯಗಳಾಗಿವೆ. ನಿಧಿಯನ್ನು ಅಧಿಕಾರಿಗಳಿಗೆ ಒಪ್ಪಿಸಿ ಕೂಲಿ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪಿಡಿಒ, ತಾಲೂಕು ಪಂಚಾಯ್ತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್‌ ಅವರಿಗೆ ನಾಣ್ಯಗಳನ್ನು ಹಸ್ತಾಂತರ ಮಾಡಲಾಗಿದೆ. ಈ ಎಲ್ಲಾ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಖಜಾಂಚಿಗೆ ಒಪ್ಪಿಸಿದ್ದಾರೆ. 14 ನಾಣ್ಯಗಳ ಮೇಲೆ ಆನೆಯ ಚಿತ್ರವಿದೆ. ತಲಕಾಡಿನ ಗಂಗರ ರಾಜಲಾಂಛನ ಆನೆ ಆಗಿತ್ತು. ಕ್ರಿ.ಶ 10 ರಿಂದ 15ನೇ ಶತಮಾನದ ಅವಧಿಯಲ್ಲಿನ ನಾಣ್ಯಗಳಿವು ಎಂಬ ಮಾಹಿತಿ ಇದೆ. ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment