ಮಂಗಳೂರು : ಅತ್ತಾವರ ವಾರ್ಡಿನ ಬಾಬುಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ

Prakhara News
1 Min Read

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆ ನರೇಶ್ ಮತ್ತು ಯೋಗೀಶ್ ಮನೆ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿಯು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅತ್ಯಲ್ಪ ಅನುದಾನದಲ್ಲಿ ಸುಮಾರು ಒಂದು ಕೋಟಿ ಅನುದಾನವನ್ನು ಈ ಭಾಗದ ಅಭಿವೃದ್ಧಿಗೆಂದೇ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಈ 30 ಲಕ್ಷದ ಕಾಮಗಾರಿಯೂ ಒಂದು. ಇದೊಂದು ಪ್ರಮುಖ ರಸ್ತೆಯಾಗಿದ್ದು ಸ್ಥಳೀಯರ ಅನುಕೂಲಕ್ಕಾಗಿಯೇ ನಿರ್ಮಿಸಲಾಗುತ್ತಿರುವ ಈ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಉಂಟಾಗುವ ಅಡೆತಡೆಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಎಂದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ.ಶೆಟ್ಟಿ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ, ಲಲ್ಲೇಶ್, ಪ್ರಮೋದ್ ಕೊಟ್ಟಾರಿ, ರಾಜೇಂದ್ರ ಶೆಟ್ಟಿ, ಸೋಮಶೇಖರ್, ಭಾಸ್ಕರ್ ರಾವ್, ನಾರಾಯಣ ಕುಂದರ್, ಲೋಕೇಶ್, ಪ್ರಾಣೇಶ್, ತರುಣ್, ಪ್ರವೀಣ್ ಪಿ.ಆರ್, ಚಂದ್ರಶೇಖರ್, ಮಹಿಳಾ ಪ್ರಮುಖರಾದ ಲಲಿತಾ, ಪ್ರಿತಾ ಕಾಮತ್, ಪೂಜಾ, ಅರ್ಜನಾ ರೈ, ಪದ್ಮನಾಭ ಶೆಟ್ಟಿ, ಸುರೇಶ್ ಅಂಚನ್, ವಿಜಯ್ ಕುಮಾರ್ ರೈ, ಚಂದ್ರಕಲಾ, ಶೋಭಾ, ರೇಣುಕಾ, ಯಶೋಧ, ನವೀನ, ಮೋಹಿತ್, ರಂಜಿತ್, ಡ್ಲಾರಿ ರೇಗೋ, ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment