ಎಷ್ಟೇ ದೊಡ್ಡ ಸಂಸ್ಥೆಗಳಾಗಿರಲಿ ಯಾರಿಗೂ ವಿನಾಯಿತಿ ಇಲ್ಲ- ಆಹಾರ ಸಂಸ್ಥೆಗಳ ಮೇಲೆ ತಪಾಸಣೆ ಮುಂದುವರೆಯಲಿದೆ: ಯು. ಟಿ ಖಾದರ್ ಖಡಕ್ ಎಚ್ಚರಿಕೆ

Prakhara News
2 Min Read

ಮಂಗಳೂರು: ಆಹಾರ ತಯಾರಿಕೆ ಮತ್ತು ಮಾರಾಟ ಮಾಡುವ ಸಂಸ್ಥೆಗಳು ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಮಂಗಳೂರಿನಲ್ಲಿ ಆಹಾರ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಿಢೀರ್ ತಪಾಸಣೆ ಹಾಗೂ ದಾಳಿಗಳು ಮುಂದುವರಿಯಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಆಹಾರ ತಯಾರಿಕಾ ಸಂಸ್ಥೆಗಳ ವಿರುದ್ಧ ಈಗಾಗಲೇ ದಾಳಿ ಮತ್ತು ತಪಾಸಣೆ ನಡೆಸಲಾಗುತ್ತಿದ್ದರೂ, ಮಂಗಳೂರಿನಲ್ಲಿ ಇದೇ ರೀತಿಯ ಅಸ್ವಚ್ಛ ಪರಿಸ್ಥಿತಿಗಳು ಕಂಡುಬರುತ್ತಿರುವುದು ಆಹಾರ ಮಾರಾಟ ಸಂಸ್ಥೆಗಳ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.”ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣ ಅಧಿಕಾರಿಗಳು ದಾಳಿ ಮತ್ತು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲವು ಸಂಸ್ಥೆಗಳಲ್ಲಿ ಅಸ್ವಚ್ಛ ವಾತಾವರಣದಲ್ಲಿ ಆಹಾರ ತಯಾರಿಸಲಾಗುತ್ತಿರುವುದು ಪತ್ತೆಯಾಗಿದೆ. ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ದಿಢೀರ್ ತಪಾಸಣೆಗಳು ನಿಯಮಿತವಾಗಿ ನಡೆಯಲಿವೆ” ಎಂದರು.”ಎಲ್ಲಾ ಆಹಾರ ಸಂಸ್ಥೆಗಳು ತಮ್ಮ ಅಡುಗೆಮನೆಗಳು ಹಾಗೂ ಆಹಾರ ಸಂಗ್ರಹ ಕೊಠಡಿಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಸಂಸ್ಥೆಗೂ ವಿನಾಯಿತಿ ನೀಡುವುದಿಲ್ಲ. ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಾದರೂ ತಪಾಸಣೆ ನಡೆಯಬಹುದು” ಎಂದು ಎಚ್ಚರಿಸಿದರು.”ಸಂಸ್ಥೆ ಎಷ್ಟೇ ದೊಡ್ಡದಾಗಿದ್ದರೂ ಯಾವುದೇ ರೀತಿಯ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ತಪಾಸಣೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗುವುದು. ಕ್ಯಾಟರಿಂಗ್ ಸಂಸ್ಥೆಗಳು, ಪೇಯಿಂಗ್ ಗೆಸ್ಟ್ (ಪಿಜಿ) ಕೇಂದ್ರಗಳು ಹಾಗೂ ಹಾಸ್ಟೆಲ್‌ಗಳ ಮೇಲೂ ತಪಾಸಣೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದಲ್ಲಿ ಜಂಟಿ ಕಾರ್ಯಾಚರಣೆಗಳನ್ನು ನಡೆಸಲಾಗುವುದು” ಎಂದು ಮಾಹಿತಿ ನೀಡಿದರು.

”ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯೂ ಇದೆ ಎಂಬುದನ್ನು ಸಚಿವರು ಒಪ್ಪಿಕೊಂಡರು. ತಪಾಸಣೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಲಿದೆ” ಎಂದು ತಿಳಿಸಿದರು.”ತಪಾಸಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಲಿದೆ. ಸಿಬ್ಬಂದಿ ನೇಮಕಾತಿಯ ಜೊತೆಗೆ ವೈಜ್ಞಾನಿಕ ಪ್ರಯೋಗಾಲಯಗಳ ಅಗತ್ಯತೆಯ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗಿದೆ” ಎಂದು ಹೇಳಿದರು.ಆಹಾರ ಸಂಸ್ಥೆಗಳ ಮೇಲಿನ ತಪಾಸಣೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿರುವ ಆಹಾರ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸ್ವಚ್ಛತೆ, ಸುರಕ್ಷಿತ ಆಹಾರ ತಯಾರಿಕಾ ಕ್ರಮಗಳು ಹಾಗೂ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

Share This Article
Leave a Comment