Home ಉಡುಪಿ ದೇಶದೆಲ್ಲೆಡೆ ಹೋಳಿ ಸಂಭ್ರಮ: ‘ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ’- ಮೋದಿ ಶುಭ ಹಾರೈಕೆ

ದೇಶದೆಲ್ಲೆಡೆ ಹೋಳಿ ಸಂಭ್ರಮ: ‘ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ’- ಮೋದಿ ಶುಭ ಹಾರೈಕೆ

0

ನವದೆಹಲಿ: ಹೋಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ತುಂಬಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಶುಭ ಹಾರೈಸಿದ್ದಾರೆ.

ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಸಂತೋಷದಿಂದ ತುಂಬಿರುವ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ. ದೇಶದ ಜನರಲ್ಲಿ ಏಕತೆಯ ಬಣ್ಣವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಬರೆದುಕೊಂಡಿದ್ದಾರೆ.

ದೇಶದೆಲ್ಲೆಡೆ ಹೋಳಿಯ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಸಡಗರದಿಂದ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಹೋಳಿ ಸಹ ಒಂದು. ಹೋಳಿ, ಜಗತ್ತಿಗೆ ಮೋಡಿ ಮಾಡಿರುವ ಹಬ್ಬ.ಈ ಹಬ್ಬ ಸಂಪ್ರದಾಯ, ಆಧುನಿಕತೆ, ಆಕರ್ಷಣೆ, ಜನಪ್ರಿಯತೆಗಳಲ್ಲಿ ವಿಶೇಷ ಸ್ಥಾನ ಗಳಿಸಿದೆ.

 

LEAVE A REPLY

Please enter your comment!
Please enter your name here