Home ಕರಾವಳಿ ಮಂಗಳೂರು: ಅನಿಲ ಸುರಕ್ಷತೆಯ ತಪಾಸಣೆ: ಗ್ರಾಹಕರಿಕೆ ತಪಾಸಣೆ ಕಡ್ಡಾಯವಲ್ಲ-ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

ಮಂಗಳೂರು: ಅನಿಲ ಸುರಕ್ಷತೆಯ ತಪಾಸಣೆ: ಗ್ರಾಹಕರಿಕೆ ತಪಾಸಣೆ ಕಡ್ಡಾಯವಲ್ಲ-ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

0

ಮಂಗಳೂರು: ತೈಲ ಕಂಪನಿಗಳ ನಿರ್ದೇಶನದಂತೆ ಎಚ್.ಪಿ. ಗ್ಯಾಸ್ ಏಜೆನ್ಸಿಗಳಿಂದ ಅನಿಲ ಸುರಕ್ಷತೆಯ ತಪಾಸಣೆ ನಡೆಯಲಿದೆ.ಗ್ರಾಹಕರ ಮನೆಗೆ ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಗ್ಯಾಸನ್ನು ಪರಿಶೀಲಿಸಿದ ನಂತರ ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕ 236 ರೂ.ಗಳನ್ನು ತೆರಬೇಕೆಂದೂ, ರಬ್ಬರ್ ಟ್ಯೂಬ್ ಬದಲಾಯಿಸಬೇಕಾದಲ್ಲಿ 190 ರೂ. ನೀಡಬೇಕೆಂಬುದಾಗಿ ತಿಳಿಸಬಹುದಾಗಿದೆ.ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ. ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದ್ದೇ ಆದಲ್ಲಿ, ಅವರ ಅನುಮತಿ ಮೇರೆಗೆ ಮಾತ್ರ ಗ್ರಾಹಕರ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ.ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಅಡುಗೆ ಅನಿಲ ತಪಾಸಣೆಯನ್ನು ಕೈಗೊಳ್ಳಬೇಕಾಗಿದ್ದಲ್ಲಿ ತಮ್ಮ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.


LEAVE A REPLY

Please enter your comment!
Please enter your name here