Home ಕರಾವಳಿ ಕೆಯ್ಯೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

ಕೆಯ್ಯೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

0

ಕೆಯ್ಯೂರು: ವಿಶ್ವ.ಹಿಂದೂ ಪರಿಷತ್ ಭಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಕೆಯ್ಯೂರು, ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ, ವಿಶ್ವ ಹಿಂದೂ ಪರಿಷತ್ ಯುವ ಕೇಸರಿ ಘಟಕ ಅಂಕತ್ತಡ್ಕ, ಇದರ ಜಂಟಿ ಸಹಯೋಗದಲ್ಲಿ ಅಖಿಲ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಅ13ರಂದು ರಾತ್ರಿ ಭಾರತ ಮಾತಾ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೆಯ್ಯೂರು ದೇವಳದ ದ್ವಾರದಿಂದ ದೇವಳದ ವಠಾರ ತನಕ ನಡೆಯಿತು.


ಈ ಸಂದರ್ಭದಲ್ಲಿ ಅಖಂಡ ಭಾರತ್ ಸಂಕಲ್ಪ ದಿನಾಚರಣೆ. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು, ಗ್ರಾಮಾಂತರ ಪ್ರಖಂಡ ಬಲೋಪಾಸನ ಪ್ರಮುಖ್ ದಿನೇಶ್ ತಿಂಗಳಾಡಿ ,ಗ್ರಾಮಾಂತರ ಪ್ರಖಂಡ ಪ್ರಸಾರ ಪ್ರಚಾರ ಪ್ರಮುಖ್ ಭರತ್ ಕಾವು,ಬಂಟ್ವಾಳ ಪ್ರಖಂಡ ಪ್ರಮುಖರು, ತಿಂಗಳಾಡಿ ವೀರಾಂಜನೇಯ ಘಟಕದ ಕಾರ್ಯಕರ್ತರು, ಕೈಯ್ಯೂರು ದುರ್ಗಾ ಶಾಖೆ ಘಟಕದ ಪ್ರಮುಖರು, ಬಿಜೆಪಿ ಮಹಿಳಾ ಶಕ್ತಿ ಪ್ರಮುಖರು, ಮತ್ತು ಹಿಂದೂ ಕಾರ್ಯಕರ್ತರು. ಭಾಷಣವನ್ನು ವಿ.ಹಿ.ಪ. ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಮಾಡಿದರು. ಅದ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ, ಕೆಯ್ಯೂರು ಘಟಕ ಅಧ್ಯಕ್ಷ ಚರಣ್ ಕುಮಾರ್ ಅದ್ಯಕ್ಷತೆ ವಹಿಸಿದ್ದರು, ಶ್ರೀ ದುರ್ಗಾ ಶಾಖೆ ಕೆಯ್ಯೂರು ಇದರ ಸಂಯೋಜಕ ಸಂದೀಪ್ ಸಣಂಗಳ, ವಿ.ಹಿ.ಪ. ಪುತ್ತೂರು ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿಕುಮಾರ್ ಕೈತಡ್ಕ ಸ್ವಾಗತಿಸಿ, ವಿ.ಹಿ.ಪ ಪುತ್ತೂರು ಗ್ರಾಮಾಂತರ ಪ್ರಖಂಡ ಬಜರಂಗದಳ ಸಂಯೋಜಕ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕಾರ್ಯಕರ್ತರು, ಮಾತೃಶಕ್ತಿ, ದುರ್ಗಾವಾಹಿನಿ ಕಾರ್ಯಕರ್ತೆಯರು, ಸಾರ್ವಜನಿಕ ಬಂದುಗಳು,ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here