ಬಿ.ಸಿ ರೋಡ್: ನೂತನ ಹವಾನಿಯಂತ್ರಿತ “ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್” ಶುಭಾರಂಭ

Prakhara News
1 Min Read

ಬಂಟ್ವಾಳ: ಬಿ.ಸಿ ರೋಡ್ ನ ಮೊಡಂಕಾಪು ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಚೇತನ್. ಜೆ. ಕೋಟ್ಯಾನ್ ಮಾಲಕತ್ವದ ನೂತನ ಹವಾ ನಿಯಂತ್ರಿತ “ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್” ಇಂದು ಶುಭಾರಂಭಗೊಂಡಿತು.

ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್ ಬಂಟ್ವಾಳದ ನಲ್ಕೆಮಾರ್ ನಲ್ಲಿ ಈಗಾಗಲೇ ಹೆಸರುವಾಸಿಯಾಗಿದ್ದು ಇಂದು ಹೋಟೆಲ್ ನ ನೂತನ ಶಾಖೆ ಉದ್ಘಾಟನೆಗೊಂಡಿತು. ಮಾಲಕರ ತಾಯಿಯಾದ ಶ್ರೀಮತಿ ಬೇಬಿ ಹಾಗೂ ಧರ್ಮಪತ್ನಿ ಶ್ರೀಮತಿ ಜಯಶ್ರೀ ಚೇತನ್ , ಅಮ್ಟಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್ ಅಮ್ಟಾಡಿ, ಟ್ರಾಫಿಕ್ ಎ.ಎಸ್.ಐ ಲೋಕೇಶ್ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಉಳಿದಂತೆ ಮುಖ್ಯ ಅತಿಥಿಗಳಾಗಿ ಶಿವಗಣೇಶ್ ಕಾಂಪ್ಲೆಕ್ಸ್ ನ ಮಾಲಕರಾದ ಸಂಜೀವ ಶೆಟ್ಟಿ, ಉಮಾವತಿ ಶೆಟ್ಟಿ ಹಾಗೂ ಸ್ಟಾರ್ ಸುವರ್ಣ ಕಾಮಿಡಿ ಗ್ಯಾಂಗ್ಸ್ ಖ್ಯಾತಿಯ ಜನಪ್ರಿಯ ಹಾಸ್ಯ ಕಲಾವಿದ ಮನೀಶ್ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿದರು.

ಶುಚಿ-ರುಚಿಗೆ ಮುಖ್ಯ ಆದ್ಯತೆ ನೀಡಿ ಗ್ರಾಹಕರಿಗೆ ನಗುಮೊಗದ ಸೇವೆಯನ್ನು ನೀಡಲು ಸದಾ ಸಿದ್ಧರಿರುವ ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಅರೇಬಿಕ್ ಹಾಗೂ ಕರಾವಳಿ ಖಾದ್ಯಗಳು ಒಂದೇ ಸೂರಿನಲ್ಲಿ
ದೊರಕಲಿದೆ ಎಂದು ಮಾಲಕರಾದ ಚೇತನ್ ತಿಳಿಸಿದರು.
ಅಲ್ಲದೆ ಈಗಾಗಲೇ ಹಲವಾರು ಗ್ರಾಹಕರನ್ನು ಹೊಂದಿರುವ ಜನಪ್ರಿಯ ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್ ನ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

Share This Article
Leave a Comment