ಬಂಟ್ವಾಳ: ಕಳೆದ 14 ವರ್ಷಗಳಿಂದ ಬಿ.ಸಿ ರೋಡ್ ಕೈಕಂಬ ದ್ವಾರದ ಬಳಿ ಕಾರ್ಯಾಚರಿಸುತ್ತಿರುವ ಹೆಸರಾಂತ ವಿಜಯ್ ಅಯ್ಯಂಗಾರ್ ಬೇಕರಿಯ ಎರಡನೇ ಶಾಖೆ ಕೈಕಂಬ ದ್ವಾರದ ಪಕ್ಕದಲ್ಲಿರುವ ಡಿ.ಪಿ ಸ್ಟೋರ್ ಬಳಿ ಇಂದು ಉದ್ಘಾಟನೆಗೊಂಡಿತು.


ಶ್ರೀ ವಿಜಯ್ ಅವರ ಮಾಲಕತ್ವದ “ವಿಜಯ್ ಅಯ್ಯಂಗಾರ್ ಬೇಕರಿ” ಬಂಟ್ವಾಳ ತಾಲೂಕಿನಲ್ಲಿ ಹೆಸರುವಾಸಿಯಾಗಿದ್ದು ವಿಶೇಷವಾಗಿ ಅವರ ಎಗ್ ಮಸಾಲಾ ಬನ್ ಜನಪ್ರಿಯವಾಗಿದೆ ಇದನ್ನು ಸವಿಯಲು ಮಂಗಳೂರು, ಬೆಳ್ತಂಗಡಿ,ಉಜಿರೆಯಿಂದ ಕೂಡ ಗ್ರಾಹಕರು ಬರುತ್ತಾರೆ ಎಂದು ಮಾಲಕರು ತಿಳಿಸಿದರು.

ಅದಲ್ಲದೆ ಎಲ್ಲಾ ತರಹದ ತಾಜಾ ಬೇಕರಿ ಉತ್ಪನ್ನಗಳು , ಬರ್ತ್ ಡೇ ಕೇಕ್ ಗಳು ಅದರಲ್ಲೂ ವಿಶೇಷವಾಗಿ ಐಸ್ ಕ್ರೀಮ್ ಕೇಕ್, ಕೂಲ್ ಕೇಕ್ , ಟಾಯ್ ಕೇಕ್, ಪೇಸ್ಟರಿಗಳು ದೊರೆಯುತ್ತಿದ್ದು ಶುಭ ಸಮಾರಂಭಗಳಿಗೆ ದೊಡ್ಡ ಮಟ್ಟದ ಆರ್ಡರ್ ಗಳನ್ನೂ ಕೂಡ ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡುವುದರಲ್ಲಿ ವಿಜಯ್ ಅಯ್ಯಂಗಾರ್ ಬೇಕರಿ ಹೆಸರುವಾಸಿಯಾಗಿದೆ.

ಈಗಾಲೇ ಅಪಾರ ಗ್ರಾಹಕರನ್ನು ಹೊಂದಿರುವ ವಿಜಯ್ ಅಯ್ಯಂಗಾರ್ ಬೇಕರಿಯ ಹೊಸ ಮಳಿಗೆಗೆ ಕೂಡ ಭೇಟಿ ನೀಡಿ ಖಾದ್ಯಗಳನ್ನು ಸವಿದು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಬೇಕೆಂದು ಮಾಲಕರಾದ ಶ್ರೀ ವಿಜಯ್ ತಿಳಿಸಿದರು.




