Home ಕರಾವಳಿ 24 ಗಂಟೆಯೊಳಗೆ ರಘುಪತಿ ಭಟ್ ಚುನಾವಣಾ ಕಣದಿಂದ ನಿವೃತ್ತರಾಗದಿದ್ದರೆ ಶಿಸ್ತು ಕ್ರಮ : ಸುನೀಲ್ ಕುಮಾರ್

24 ಗಂಟೆಯೊಳಗೆ ರಘುಪತಿ ಭಟ್ ಚುನಾವಣಾ ಕಣದಿಂದ ನಿವೃತ್ತರಾಗದಿದ್ದರೆ ಶಿಸ್ತು ಕ್ರಮ : ಸುನೀಲ್ ಕುಮಾರ್

0

ಡುಪಿ : ಈಗಾಗಲೇ ವಿಧಾನಸಭಾ ಟಿಕೆಟ್ ನಿಂದ ವಂಚಿತರಾಗಿರುವ ಮಾಜಿ ಶಾಸಕ ರಘುಪತಿ ಭಟ್ ಇದೀಗ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇವರ ಈ ನಿರ್ಧಾರಕ್ಕೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ 24 ಗಂಟೆ ಒಳಗೆ ಚುನಾವಣೆಯಿಂದ ನಿವೃತ್ತಿ ಆಗದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 24 ಗಂಟೆಯೊಳಗಾಗಿ ರಘುಪತಿ ಭಟ್ ಅವರು ವಿಧಾನಪರಿಷತ್ ಚುನಾವಣಾ ಕಣದಿಂದ ನಿವೃತ್ತರಾಗದಿದ್ದರೆ ಪಕ್ಷದಿಂದ ಶಿಸ್ತುಕ್ರಮ ಅನಿವಾರ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಘುಪತಿ ಭಟ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಏನು ಬೇಕೋ ಅದನ್ನೆಲ್ಲ ನಾವು ಪಕ್ಷದ ವತಿಯಿಂದ ಮಾಡುತ್ತೇವೆ. ರಘುಪತಿ ಭಟ್ ಆಗಲಿ ಯಾರೇ ಆಗಲಿ, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೇ ಮಾಡಿದರೂ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here