Home ಕರಾವಳಿ ವಿಧಾನಸಭೆಯಲ್ಲಿ ಶಾಸಕ ಸುನೀಲ್ ಕುಮಾರ್ ವರ್ತನೆ ಮತ್ತು ಅಮಾನತು ಕ್ಷೇತ್ರದ ಜನ ತಲೆ ತಗ್ಗಿಸುವಂತಾಗಿದೆ- ಶುಭದರಾವ್

ವಿಧಾನಸಭೆಯಲ್ಲಿ ಶಾಸಕ ಸುನೀಲ್ ಕುಮಾರ್ ವರ್ತನೆ ಮತ್ತು ಅಮಾನತು ಕ್ಷೇತ್ರದ ಜನ ತಲೆ ತಗ್ಗಿಸುವಂತಾಗಿದೆ- ಶುಭದರಾವ್

Śubhadarāv

0

ಕರ್ನಾಟಕ ‌ವಿಧಾನಸಭೆಯ ಕಲಾಪದ‌ ಸಂದರ್ಬದಲ್ಲಿ ಸಭಾದ್ಯಕ್ಷರ ಮೇಲೆ ಕಾಗದ ಪತ್ರವನ್ನು ಎಸೆದು ಅಸಭ್ಯ ವರ್ತನೆ ತೋರಿದ ಕಾರಣ ಅಮಾನತು ಶಿಕ್ಷೆಗೆ ಒಳಗಾದ ಕಾರ್ಕಳ ಶಾಸಕ ಸುನೀಲ್ ಕುಮಾರವರ ವರ್ತನೆಯಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಕಾರ್ಕಳದಲ್ಲಿ ಅನೇಕ ಮಹನೀಯರು ಕ್ಷೇತ್ರ ಶಾಸಕರಾಗಿ ಸೇವೆ ಸಲ್ಲಿಸಿದಾರೆ. ರಾಜ್ಯದ ವಿವಿದ ಇಲಾಖೆಗಳ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸರಕಾರದ ಸಚಿವರಾಗಿ ಸುದೀರ್ಘವಾಗಿ ಅಧಿಕಾರ ನಡೆಸಿದರೂ ಯಾರು ಕೂಡ ಇಂತಹ‌ ವರ್ತನೆ ತೋರಿ ಅಮಾನತು ಶಿಕ್ಷೆಗೆ ಒಳಗಾಗಲಿಲ್ಲ, ಬದಲಿಗೆ ತಮ್ಮ ಕಾರ್ಯ‌ವೈಕರಿಯಿಂದ ಕ್ಷೇತ್ರದ ಗೌರವವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಿದ್ದಾರೆ ಆದರೆ ಶಾಸಕ ಸುನೀಲ್ ಕುಮಾರ್ ವರ್ತನೆಯಿಂದ ಕ್ಷೇತ್ರದ ಜನ‌ರಿಗೆ ಮಾಡಿದ ಅವಮಾನವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯದ ಕೋಟ್ಯಾಂತರ ಜನರ ಬದುಕಿಗೆ ಮತ್ತು ರಾಜ್ಯದ ಒಟ್ಟು ಅಭಿವೃದ್ಧಿಗೆ ಪೂರಕವಾದ ಯೋಜನೆಗಳು‌ ಜಾರಿಯಾಗುತ್ತದೆ, ಅದೊಂದು ದೇವಾಲಯ ಇದ್ದಂತೆ ಇಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಹಾಗಿರುವಾಗ ಕುಲಕ್ಷ ಕಾರಣಕ್ಕಾಗಿ ಈ ರೀತಿಯ ವರ್ತನೆ ನಿಜಕ್ಕೂ ಬೇಸರದ ಸಂಗತಿ, ಶಾಸಕರು ತಮ್ಮ ಹಳೇ ಚಾಳಿಯನ್ನು ಬಿಟ್ಟರೆ ಅವರಿಗೇ ಒಳಿತು ಮತ್ತು ಕ್ಷೇತ್ರದ ಗೌರವ ಕಾಪಾಡಿದಂತಾಗುತ್ತದೆ. ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here