ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ ಬಸ್‌ವೊಂದು ಡೀಸೆಲ್ ಖಾಲಿಯಾಗಿ ನಡು ರೋಡಲ್ಲಿ ಪ್ರಯಾಣಿಕರನ್ನ ಇಳಿಸಿದ ಘಟನೆ ಶಿವಮೊಗ್ಗ ಹುಲಿಕಲ್ ಘಾಟಿಯ ಬಳಿ ನಡೆದಿದೆ.
ಶಿವಮೊಗ್ಗದಿಂದ ಕುಂದಾಪುರ ಹೋಗುತ್ತಿದ್ದ ಬಸ್ ನಿನ್ನೆ ಸಂಜೆ ಮಾಸ್ತಿಕಟ್ಟೆ ಸಮೀಪ ಡಿಸೇಲ್ ಇಲ್ಲ ಎನ್ನುವ ಕಾರಣಕ್ಕೆ ನಿಂತಿದೆ ಎನ್ನಲಾಗಿದೆ.
ಬಸ್‌ನ ಡ್ರೈವರ್ ಹಾಗೂ ಕಂಡಕ್ಟರ್ ವಿಷಯವನ್ನು ತಮ್ಮ ಮೇಲಾಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದ ವೇಳೆಯಲ್ಲಿ ಅಧಿಕಾರಿಗಳು ನಿಮ್ಮ ಹಣದಿಂದಲೇ ಡಿಸೇಲ್ ಹಾಕಿಸಿಕೊಂಡು ಬನ್ನಿ ಅಂತ ಹೇಳಿ ತಮ್ಮ ಉದಾಸೀನವನ್ನು ಮಾಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಹಿಳೆಯರು ಮಕ್ಕಳು ಕೂಡ ಈ ಘಟನೆಯಿಂದ ನೊಂದು ಹೋಗಿದ್ದಾರೆ ಎನ್ನಲಾಗಿದೆ. ಈ ನಡುವೆ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸಿ ಅವರವರ ಊರಿಗೆ ಹೋಗಿದ್ದಾರೆ ಎನ್ನಲಾಗಿದೆ. ಇನ್ನೂ ಕಳೆದ ಒಂದು ತಿಂಗಳಿನಲ್ಲಿ ಇದೇ ಮಾರ್ಗದಲ್ಲಿ ಮೂರು ಸಲ ಕೆಎಸ್‌ಆರ್‌ಟಿಸಿ ಬಸ್ ಡೀಸೆಲ್ ಇಲ್ಲದೆ ನಿಂತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಸರ್ಕಾರ ಈ ಕೂಡಲೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.