ಮುಡಿಪು: ಜೆನಿತ್ ಸ್ಕೂಲ್ ಗೆ ದ್ವಿಗುಣ ಸಂಭ್ರಮ – ಪ್ರತಿಷ್ಠಿತ MEIF ಪ್ರಶಸ್ತಿಗೆ ಭಾಜನ

Prakhara News
0 Min Read

ಮುಡಿಪು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿ, ಈ ಅಪೂರ್ವ ಸಾಧನೆಗಾಗಿ ಎಂ.ಇ.ಐ.ಎಫ್ (MEIF) ಪ್ರಶಸ್ತಿಗೆ ಭಾಜನವಾಗಿದೆ.

ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಹಾಗೂ ಪೋಷಕರ ನಿರಂತರ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ.ಇದಲ್ಲದೆ, ಎಂ.ಇ.ಐ.ಎಫ್ ವತಿಯಿಂದ ಆಯೋಜಿಸಲಾದ ಮಾರ್ಚ್ ಪಾಸ್ಟ್ ಸ್ಪರ್ಧೆಯಲ್ಲಿ ಜೆನಿತ್ ಸ್ಕೂಲ್, ಮುಡಿಪು ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದು ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಎರಡೂ ಸಾಧನೆಗಳಿಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಜೆನಿತ್ ಸ್ಕೂಲ್, ಮುಡಿಪು ಆಡಳಿತ ಮಂಡಳಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

Share This Article
Leave a Comment