ಪ್ರದೀಪ್ ಪೂಜಾರಿ ಸಾವು ಪ್ರಕರಣ: ಆರೋಪಿತ ಪೊಲೀಸ್ ಅಧಿಕಾರಿಗಳ ಅಮಾನತು, ಕಠಿಣ ಕ್ರಮಕ್ಕೆ ಪದ್ಮರಾಜ್ ಆರ್. ಆಗ್ರಹ..!

Prakhara News
1 Min Read

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ಪೆರ್ಡೂರಿನ ಯುವಕ ಪ್ರದೀಪ್ ಪೂಜಾರಿ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಅವರು ಇಂದು ಭೇಟಿ ನೀಡಿ, ದುಃಖದಲ್ಲಿರುವ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮೃತ ಪ್ರದೀಪ್ ಪೂಜಾರಿ ಅವರ ದೇಹದ ಮೇಲಿರುವ ತೀವ್ರ ಗಾಯದ ಗುರುತುಗಳನ್ನು ಗಮನಿಸಿ, ಪ್ರಕರಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಈ ಕುರಿತು ತಕ್ಷಣವೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಾಗೂ ಐಜಿಪಿಯವರನ್ನು ಸಂಪರ್ಕಿಸಿ ಮಾತನಾಡಿರುವ ಅವರು, ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು

ಕರ್ತವ್ಯದ ಮಿತಿಮೀರಿ ನಡೆದುಕೊಂಡು ಯುವಕನ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ತನಿಖೆಯ ಮೂಲಕ ಸತ್ಯಾಂಶ ಹೊರತಂದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪದ್ಮರಾಜ್ ಆರ್. ಅವರು ಒತ್ತಾಯಿಸಿದರು.

Share This Article
Leave a Comment