ಫೈನಾನ್ಸ್‌ ಮಾಲಕನಿಂದ ಸೇವಾ ನ್ಯೂನತೆ: ಹಣ ಪಾವತಿಸುವಂತೆ ನ್ಯಾಯಾಲಯ ಆದೇಶ

Prakhara News
1 Min Read
Judge and gavel in courtroom

ಮಂಗಳೂರು: ಠೇವಣಿದಾರರ ಹಣ ವಾಪಾಸು ನೀಡದೆ, ಸೇವಾ ನ್ಯೂನತೆ ತೋರಿದ ಫೈನಾನ್ಸ್ ಮಾಲಕರಿಗೆ ಜಿಲ್ಲಾ ಗ್ರಾಹಕ ನ್ಯಾಯಲಯ ಹಣ ಪಾವತಿಸುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಲ್ಲಿ ದೂರುದಾರರು ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಿದೆ.

ಲಕ್ಷ್ಮಿಕಾಂತ್ ಎಂಬವರ ಮಾಲಕತ್ವದ ಫೈನಾನ್ಸ್ ನಲ್ಲಿ ದೂರುದಾರರಾದ ಉಷಾ ಸಾಲಿಯಾನ್ 2.75 ಲಕ್ಷ ರೂ., ಸುಂದರ ಅವರು 4 ಲಕ್ಷ ರೂ. ಹಾಗೂ ಕೃಷ್ಣ ಭಟ್ ಅವರು 90 ಸಾವಿರ ರೂ. ಹಣ ನಿಶ್ಚಿತ ಠೇವಣಿ (ಎಫ್ ಡಿ)ಗೆ ಹೂಡಿಕೆ ಮಾಡಿದ್ದರು. ಆದರೆ ಮಾಲಕರು ಹಣವನ್ನು ವಾಪಾಸು ನೀಡದಿರುವ ಹಿನ್ನೆಲೆಯಲ್ಲಿಗ್ರಾಹಕ ಸಂರಕ್ಷಣ ಕಾಯ್ದ2019ರ ಕಲಂ 35ರಡಿ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದರು.ಪ್ರಕರಣವನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಲಕ್ಷ್ಮಿಕಾಂತ್ ಅವರು ತಪ್ಪಿತಸ್ಥ ಎಂದು ಆದೇಶಿಸಿದೆ. ದೂರುದಾರರ ಎಲ್ಲ ನಿಶ್ಚಿತ ಠೇವಣಿ ಹಣ ನೀಡಬೇಕು. ಜತೆಗೆ ಶೇ.14 ಬಡ್ಡಿ ನೀಡಬೇಕು. 45 ದಿನದೊಳಗೆ ಹಣ ಪಾವತಿ ಮಾಡದಿದ್ದರೆ ದೂರುದಾರರು ಸಿವಿಲ್ ಹಾಗೂ ಕ್ರಿಮಿನಲ್‌ ಮೊಕದ್ದಮೆ ಹೂಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಿದೆ.

ದೂರುದಾರರ ಪರವಾಗಿ ವರಿಟಾಸ್ ಲೆಗೀಸ್ ನ ವಕೀಲರಾದ ರಾಘವೇಂದ್ರ ರಾವ್, ಕಟೀಲ್ ಗೌರಿ ಶೆಣೈ, ರೋಸ್ಟಾನ್ ವಿಜಯ್ ಡಿ’ಸೋಜಾ, ಅನಘ ಯು. ವಾದ ಮಂಡಿಸಿದ್ದಾರೆ.

Share This Article
Leave a Comment