Home ಕರಾವಳಿ ವೇಣೂರು: ಪಲ್ಟಿಯಾದ ಖಾಸಗಿ ಬಸ್..! ಹಲವರಿಗೆ ಗಾಯ

ವೇಣೂರು: ಪಲ್ಟಿಯಾದ ಖಾಸಗಿ ಬಸ್..! ಹಲವರಿಗೆ ಗಾಯ

0

ವೇಣೂರು: ರಾಜ್ಯ ಹೆದ್ದಾರಿ 70ರ ಮೂಡಬಿದ್ರಿ – ಬೆಳ್ತಂಗಡಿ ರಸ್ತೆಯ ವೇಣೂರು ಸಮೀಪ ಗಾಂಧಿನಗರದಲ್ಲಿ ಮೂಡಬಿದ್ರಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.


ಘಟನೆಯಿಂದ 7-8 ಜನಕ್ಕೆ ಗಾಯಗಳಾಗಿದ್ದು ಆಂಬುಲನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು. ರಾತ್ರಿ 10.30ಕ್ಕೆ ಘಟನೆ ನಡೆದಿದ್ದು ಸುಮಾರು ಎರಡು ಗಂಟೆ ರಸ್ತೆ ತಡೆಯಾಗಿದ್ದು ಕ್ರೇನ್ ತರಿಸಿ ರಸ್ತೆಯನ್ನು ಕ್ಲಿಯರ್ ಮಾಡಲಾಯಿತು.

ವೇಣೂರು ಪೊಲೀಸರು ಸ್ಟಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಶ್ರಮಿಸಿದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

LEAVE A REPLY

Please enter your comment!
Please enter your name here