ಕೆಯ್ಯೂರು : ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರು, ಹಾಗೂ ಶ್ರೀ ವರ ಮಹಾಲಕ್ಷ್ಮೀ ಪೂಜಾ ಸಮಿತಿ ಕೆಯ್ಯೂರು ಇವರ ಆಶ್ರಯದಲ್ಲಿ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ಇವರ ಪೌರೋಹಿತ್ವದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅ:25 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಪೂಜೆಯಲ್ಲಿ 700ಕ್ಕಿಂತಲೂ ಅಧಿಕ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಕೆಯ್ಯೂರು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು, ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರುಗಳಾದ ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ವಿಶ್ವನಾಥ ಶೆಟ್ಟಿ ಸಾಗು, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ಚರಣ್ ಕುಮಾರ್ ಸಣಂಗಳ, ಮಮತಾ ರೈ ಕೆಯ್ಯೂರು, ಈಶ್ವರಿ ಜೆ ರೈ ಸಂತೋಷ್ ನಗರ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪಧಾಧಿಕಾರಿಗಳು, ಸಹಕರಿಸಿದ ಸಂಘ ಸಂಸ್ಥೆಗಳು , ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.