ಉಡುಪಿ: ಯಾನ್ ತುಳುವಪ್ಪೆನ ಮಗೆ, ಎನ್ನ ಬಾಲ್ಯ ಜೀವನ, ಬಾಲ್ಯ ಶಿಕ್ಷಣ ಈ ತುಳುನಾಡ್ ಮನ್ಸ್ ಡೇ. ಯಾನ್ ತುಳುನಾಡುದಾಯೆ.. ಯಾನ್ ಪುಟ್ಟುದಿನಿ ಎಂದು ಉಡುಪಿ ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.


ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪೀಠಾರೋಹಣ ಹಾಗೂ ಅಭಿಷೇಕ ಸ್ವೀಕರಿಸಿ ಅವರು ಮಾತನಾಡಿದರು. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಕೈತಲ್. ಯಾನ್ ಕಲ್ಲುದಿನಿ ಉಚ್ಚಿಲದ ಸರಸ್ವತಿ ಮಂದಿರದ ಶಾಲೆಡ್ ಹೀಗೆ ತುಳುವಿನಲ್ಲೇ ಮಾತನಾಡಿದ ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ನನ್ನ ಬಾಲ್ಯ ಜೀವನ, ಬಾಲ್ಯ ಶಿಕ್ಷಣ ತುಳುನಾಡಿನಲ್ಲೇ. ಹಾಗಾಗಿ ನಾನು “ತುಳುವಪ್ಪೆನ ಮಗೆ” ಎಂದರು.

ನಮ್ಮ ಧರ್ಮ ಯಾವುದೇ ಇರಬಹುದು. ಆದರೆ ನಾವೆಲ್ಲ ಒಂದೇ ದೇವರ ಮಕ್ಕಳು. ಈ ಭಾಷೆ, ಸಂಸ್ಕೃತಿ ಹಾಗೂ ಸಹಮಿಲನ ಸಹಬಾಳ್ವೆಗೆ ಧರ್ಮವಿಲ್ಲ. ಪ್ರೀತಿಗಿಂತ ಮಿಗಿಲಾದ ಧರ್ಮವಿಲ್ಲ. ಶಾಂತಿ ಸೌಹಾರ್ದ, ಸಹಬಾಳ್ವೆ ಇವೆಲ್ಲಾ ಇದ್ದಾಗ ಅದೆಷ್ಟು ಸುಂದರ ಬದುಕು ನಮ್ಮದು. ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಇಲ್ಲಿದ್ದೀರಿ.

ನಿಮ್ಮಲ್ಲಿ ನನ್ನದೊಂದು ವಿನಂತಿ ಯಾರ ಕಣ್ಣಲ್ಲೂ ಕಣ್ಣೀರು ತರಿಸಬೇಡಿ. ಹಸಿವಿನಿಂದ ಯಾರು ನರಳಬಾರದು. ಶಾಂತಿ ಸೌಹಾರ್ದತೆಯಿಂದ ಬಾಳಬೇಕು. ಎಲ್ಲರ ಮುಖದಲ್ಲಿ ಸಂತೋಷದ ನಗು ತಂದರೆ ಅದಕ್ಕಿಂತ ಮಿಗಿಲಾದ ಆಶೀರ್ವಾದ ಬೇರೊಂದಿಲ್ಲ ಎಂದರು.


