ಮ.ನ.ಪಾ 34 ನೇ ಕದ್ರಿ ಶಿವಭಾಗ್ ವಾರ್ಡಿನ ತಡೆಗೋಡೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಚಾಲನೆ

Prakhara News
1 Min Read

ಮಂಗಳೂರು: ಮಂಗಳೂರುಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ಕದ್ರಿ ಶಿವಭಾಗ್ ವಾರ್ಡಿನ ತೋಮನಾಯ್ಗರ ರಸ್ತೆಯ ಬದಿ ತಡೆಗೋಡೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.

ನಂತರ ಮಾತನಾಡಿದ ಶಾಸಕರು, ರಾಜಕಾಲುವೆಯಿಂದ ಮಳೆ ನೀರು ಉಕ್ಕಿ ಇಲ್ಲಿನ ಮನೆಗಳಿಗೆ ನುಗ್ಗುವುದನ್ನು ತಪ್ಪಿಸಲು ತಡೆಗೋಡೆ ನಿರ್ಮಾಣವಾಗಬೇಕೆಂದು ಈ ಭಾಗದ ಜನರು ಬೇಡಿಕೆ ಸಲ್ಲಿಸಿದ್ದರು. ಅದರಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ಅನುದಾನ ಮೀಸಲಿರಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಆ ಮೂಲಕ ರಾಜ್ಯದ ಇತಿಹಾಸದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ರಾಜಕಾಲುವೆಗೆ ಅನುದಾನ ನೀಡಿದ್ದ ಹೆಗ್ಗಳಿಕೆ ಬಿಜೆಪಿಯದ್ದು. ಅಷ್ಟರ ಮಟ್ಟಿಗೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧತೆ ಹೊಂದಿತ್ತು. ಇದೀಗ ತಡೆಹಿಡಿಯಲಾಗಿದ್ದ ಮುಂದುವರಿದ ಕಾಮಗಾರಿಗೆ ಚಾಲನೆ ದೊರೆತಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಕಾವ್ಯ ನಟರಾಜ್ ಆಳ್ವ, ಶಕ್ತಿಕೇಂದ್ರ ಪ್ರಮುಖ್ ವಿಕ್ರಂ ಚೌಟ, ಬೂತ್ ಅಧ್ಯಕ್ಷರಾದ ಶಿವರಾಮ್ ಭಂಡಾರಿ, ನವೀನ್ ಶೆಣೈ, ಯೋಗಿಶ್ ಶೆಣೈ, ನಟರಾಜ್ ಆಳ್ವ, ವನಿತಾ ರೈ, ರಂಜಿನಿ ರೈ, ಅಮಿತಾ ಶೆಟ್ಟಿ, ಅಶೋಕ್ ಶೆಟ್ಟಿ, ಮಮತಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಜಿತೇಂದ್ರ ರೈ, ಪ್ರೇಮನಾಥ ರೈ, ಶಶಿಕಾಂತ್, ಪ್ರೇಮ ಶೆಟ್ಟಿ, ಸರಳ ಶೆಟ್ಟಿ, ನಳಿನಿ ಶೆಟ್ಟಿ, ಪ್ರತಾಪ್ ಶೆಟ್ಟಿ, ನಿಶಾನ್ ಶೆಟ್ಟಿ, ಕೌಶಿಕ್ ಶೆಟ್ಟಿ, ಅರ್ಚನಾ ಆಳ್ವ, ಪ್ರತೀಕ್ ರೈ, ಸ್ಕಂದ ಕಿರಣ್, ವಿನಯ್ ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Share This Article
Leave a Comment