ಕುದ್ರೋಳಿ ಕ್ಷೇತ್ರದಲ್ಲಿ ಬಿಸು ಪರ್ಬ ವಿಶೇಷ- ಸ್ಯಾಂಡಲ್ ವುಡ್ ಸೂಪರ್ ಸಿಂಗರ್ಸ್ ಬೆಂಗಳೂರು – ನಮ್ಮ ಕುಡ್ಲದ ಖ್ಯಾತ ಕಲಾವಿದರಿಂದ ಭಕ್ತಿ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Prakhara News
1 Min Read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೌರಮಾನ ಯುಗಾದಿ- ಬಿಸು ಪರ್ಬದ ಪ್ರಯುಕ್ತ ನಿನ್ನೆ ಬೆಳಗ್ಗೆ 11.30ಕ್ಕೆ ದೇವರಿಗೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ ನಡೆಯಿತು.

ನಂತರ ಸಂಜೆ ದೇವಸ್ಥಾನದ ಸಂತೋಷಿ ಕಲಾ ಮಂಟಪದಲ್ಲಿ ಶಶಿಪ್ರಭಾ ಅಜಿತ್ ಕುಮಾ‌ರ್ ಬೆಂಗಳೂರು ಹಾಗೂ ಪ್ರತಿಭಾ ಸಾಲಿಯಾನ್ ಮಂಗಳೂರು ನೇತೃತ್ವದಲ್ಲಿ ಭಕ್ತಿ ಪ್ರಧಾನ ಸಂಗೀತ ರಸಮಂಜರಿ ಕಾರ್ಯಕ್ರಮ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಜುಲಿಯನ್ ಸಲ್ದಾನಾ ವಹಿಸಿದರು. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾದ ಶ್ರೀ ಪದ್ಮರಾಜ್ ರಾಮಯ್ಯ,ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀ ನಾಗರಾಜ್ ಆರ್. ಬಿ ಹಾಗೂ ಕುದ್ರೋಳಿ ದೇವಳದ ಮುಖ್ಯ ಸಂಘಟಕರಾದ ಶ್ರೀ ಸತೀಶ್. ಕೆ ಉಪಸ್ಥಿತರಿದ್ದರು.

ನಂತರ ಸ್ಯಾಂಡಲ್ ವುಡ್ ಸೂಪರ್ ಸಿಂಗರ್ಸ್ ಬೆಂಗಳೂರು ಹಾಗೂ ನಮ್ಮ ಕುಡ್ಲ ಖ್ಯಾತ ಕಲಾವಿದರಿಂದ ಭಕ್ತಿ ರಸಮಂಜರಿ ಹಾಗೂ ನೃತ್ಯ , ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Share This Article
Leave a Comment