ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಏ.15ರಂದು ಸೌರಮಾನ ಯುಗಾದಿ (ಬಿಸು) ಪ್ರಯುಕ್ತ ಬೆಳಗ್ಗೆ 11.30ಕ್ಕೆ ದೇವರಿಗೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ ನಡೆಯಲಿದೆ.


ಸಂಜೆ 5 ಗಂಟೆಗೆ ಶಶಿಪ್ರಭಾ ಅಜಿತ್ ಕುಮಾರ್ ಬೆಂಗಳೂರು, ಪ್ರತಿಭಾ ಸಾಲಿಯಾನ್ ಮಂಗಳೂರು ನೇತೃತ್ವದಲ್ಲಿ ಭಕ್ತಿ ಪ್ರಧಾನ ಸಂಗೀತ ರಸಮಂಜರಿ ಕಾರ್ಯಕ್ರಮ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.



