ಪುತ್ತೂರು: ಪುತ್ತೂರಿನ ಪ್ರತಿಭಾನ್ವಿತ ಗಾಯಕಿಯಾದ ಡಾ. ವಿದೂಷಿ ಪವಿತ್ರ ರೂಪೇಶ್ ರವರ ಕಂಠಸಿರಿಯಲ್ಲಿ ಮೂಡಿ ಬಂದಿರುವ “ಸುನ್ ಲೇನಾ” ಹೊಸ ಹಿಂದಿ ಆಲ್ಬಮ್ ಹಾಡು ಬಿಡುಗಡೆಗೊಂಡಿದೆ.


ಈ ಆಲ್ಬಮ್ ಹಾಡಿಗೆ ಸಾಹಿತ್ಯ ಹಾಗೂ ಸಂಗೀತವನ್ನು ಶ್ರೀ ರಾಮ್ ಕುಮಾರ್, ಬಿಹಾರ್ ನೀಡಿದ್ದಾರೆ. ಹಾಡಿನ ಮುದ್ರಣ, ಮಿಕ್ಸಿಂಗ್ ಹಾಗೂ ಸಂಕಲನವು ಉಪ್ಪಿನಂಗಡಿಯ ಸರ್ ಗಮ್ ಸ್ಟುಡಿಯೋದಲ್ಲಿ ನಡೆದಿದೆ.

ವಿದೂಷಿ ಪವಿತ್ರ ರೂಪೇಶ್ ರವರಿಗೆ 2023 ರ ಇಸವಿಯಲ್ಲಿ ದಕ್ಷಿಣದಿ ಸಂಗೀತಕ್ಕೆ “ಕರ್ಣಾಟಕ ಸಂಗೀತ” ಅಧ್ಯಯನಕ್ಕಾಗಿ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ.





