ಮಂಗಳೂರು : ಇದೇ ಬರುವ ಮಾರ್ಚ್ 20 ನೇ ತಾರೀಕಿನಂದು ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಆಯೋಜಿಸಲಿರುವ ಮೂರನೆಯ ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನವನ್ನು ಶ್ರೀದೇವಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿಯವರು ಬಿಡುಗಡೆ ಮಾಡಿದರು.



ಈ ಲಾಂಛನವನ್ನು ಐ.ಎಮ್. ಜೆ. ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ಅಂಡ್ ಕಾಮಸ್೯ ಮೂಡ್ಲಕಟ್ಟೆ ಕುಂದಾಪುರದ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿ ಶ್ರೇಯಸ್ ಶೆಟ್ಟಿಯವರು ರಚಿಸಿದ್ದಾರೆ. ಲಾಂಛನ ಬಿಡುಗಡೆಯ ಸಂದರ್ಭದಲ್ಲಿ ಶ್ರೀ ಹರಿಕಿಶನ್ ಶೆಟ್ಟಿ, ತುಳು ಪರಿಷತ್ ನ ಅಧ್ಯಕ್ಷರಾದ ಶ್ರೀ ಶುಭೋದಯ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬೆನೆಟ್ ಅಮ್ಮನ್ನ, ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶ್ವಿನ್, ಕೋಶಾಧಿಕಾರಿ ಶ್ರೀಮತಿ ಸುಮತಿ ಹೆಗ್ಡೆ, ಸ್ಪರ್ಧಾ ಸಂಚಾಲಕರಾದ ಶ್ರೀ ದುರ್ಗಾಪ್ರಸಾದ್ ಮತ್ತು ಶ್ರೀಮತಿ ಚಂದ್ರಕಲಾ ರಾವ್ ಉಪಸ್ಥಿತರಿದ್ದರು.



