ಮಡಿಕೇರಿ : ಗಾಂಜಾ ಮಾರಾಟ ಮತ್ತು ಸೇವನೆ ಆರೋಪದಡಿಯಲ್ಲಿ ಸುಳ್ಯದ ಯುವಕ ಹಾಗೂ ಒಬ್ಬಳು ಮಹಿಳೆ ಸೇರಿ 5 ಜನರನ್ನು ಬಂಧಿಸಿದ ಸೋಮವಾರಪೇಟೆಯ ಪೊಲೀಸರು.


ಗಾಂಜಾ ಮಾರಾಟ ಹಾಗೂ ಸೇವನೆ ಕುರಿತು ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಫೆ.1ರಂದು ದಾಳಿ ನಡೆಸಿದ ಕೊಡಗು ಜಿಲ್ಲಾ ಪೊಲೀಸರು 4 ಜನರನ್ನು ಹಾಗೂ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯಲ್ಲಿ ದಿನಾಂಕ: 02-02-2026 ರಂದು ದಾಳಿ ನಡೆಸಿ ಒಬ್ಬ ಆರೋಪಿಯನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿದ್ದು, ಆರೋಪಿಗಳ ವಿರುದ್ಧ ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಲಂ: 20(6) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆಕಾಶ್ ಎಂ.ಸಿ. ಮಾದಾಪುರ,ತ್ರಿಶೂಲ್ ಪಿ.ಎಲ್ ಮಡಿಕೇರಿ,ನಿತ್ಯ ಮಡಿಕೇರಿ,ಧನುಷ್ ಜಾಲ್ಸೂರು ಸುಳ್ಯ, ಭರತ್ ಕೆ.ಎಂ. ಕೊಡ್ಲಿಪೇಟೆ ಬಂಧಿತ ಆರೋಪಿಗಳು.
ಆರೋಪಿಗಳಿಂದ 1 ಕೆ.ಜಿ 628 ಗ್ರಾಂ ಗಾಂಜಾ ವಶಪಡಿಸಿ ಕೊಂಡಿರುವುದಾಗಿ ತಿಳಿದುಬಂದಿದೆ.

