ಮಂಗಳೂರು : ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಾಲಿಕೆಯ ಚುನಾವಣೆ ರಾಜ್ಯ ಸರಕಾರ ಮಾಡದಿರಲು ಮುಖ್ಯ ಮಂತ್ರಿ ಕುರ್ಚಿಯ ಗೊಂದಲ ಕಾರಣವಾಗಿದೆ ಎಂದರು.


ವಿಜಯೇಂದ್ರ ಎಲ್ಲರಿಗೂ ಅಧ್ಯಕ್ಷರು, ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ್ದು ಬಿಜೆಪಿಯ ರಾಷ್ಟ್ರೀಯ ನಾಯಕರು. ಅವರು ಬಿಜೆಪಿಯ ರಾಜ್ಯದ ಎಲ್ಲರಿಗೂ ಅಧ್ಯಕ್ಷರು. ರಾಜ್ಯದಲ್ಲಿ ಅತ್ಯಂತ ಕ್ರೀಯಾಶೀಲವಾಗಿ ಪಕ್ಷವನ್ನು ಅವರು ಮುನ್ನೆಡೆಸುತ್ತಿದ್ದಾರೆ. ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ.
ಅವರ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಅದೇನು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷನಾಗಿ ನೇಮಕಗೊಂಡು ಒಂದು ವಾರ ಕಳೆಯುವಷ್ಟರಲ್ಲಿ ನಳಿನ್ ಕುಮಾರ್ ನೇ ಅವರನ್ನು ಬಿಜೆಪಿ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರಲು ಆರಂಭಿಸಿತ್ತು. ಆದರೆ ನನಗೆ 4 ವರ್ಷ ಮತ್ತು 8 ತಿಂಗಳು ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಳಿನ್ ಕುಮಾರ್ ಕಟೀಲ್ ಉತ್ತರಿಸಿದರು.

