ಮಂಗಳೂರು: ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ- ಯುವ ಇಂಜಿನಿಯರ್ ಸಾವು

Prakhara News
0 Min Read

ಮಂಗಳೂರು: ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಯುವ ಎಂಜಿನಿಯರ್ ಸಾವಿಗೀಡಾಗಿದ್ದಾರೆ.ಮಂಗಳೂರಿನಲ್ಲಿ ಸ್ಥಳೀಯ ಆಹಾರ

ಸ್ಥಳೀಯ ನಿವಾಸಿ ಕೌಶಿಕ್ (27) ಮೃತಪಟ್ಟವರು. ನಿತ್ಯವೂ ಬೆಳಗ್ಗೆ ಮನೆಗಳಿಗೆ ಪೇಪ‌ರ್ ಹಾಕುತ್ತಿದ್ದರು. ತಂದೆಯ ಜೊತೆಗೆ ಬೆಳಗ್ಗೆ ಪೇಪರ್ ಹಾಕಿ ಬರುತ್ತಿರಬೇಕಾದರೆ ಕೌಶಿಕ್ ಸವಾರಿ ನಡೆಸುತ್ತಿದ್ದ ಬೈಕ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಕೌಶಿಕ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment