ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಗುಡ್ಡ ಕುಸಿತ- ಸಂಚಾರ ಬಂದ್‌..!

Prakhara News
0 Min Read

ನೆಲ್ಯಾಡಿ: ಮಣ್ಣಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಗುಡ್ಡ ಕುಸಿತವಾಗಿದ್ದು ಪರಿಣಾಮ ಬೆಂಗಳೂರು-ಮಂಗಳೂರು ಸಂಚಾರ ಬಂದ್ ಆಗಿ ವಾಹನ ಸವಾರರು ಪರದಾಡುವಂತಾಗಿತ್ತು.

ರಸ್ತೆಗೆ ರಾಶಿ ರಾಶಿ ಮಣ್ಣು ಹಾಗೂ ಮರ ಬಿದ್ದಿರುವುದರಿಂದ ಇಂದು ಬೆಳಗಿನ ಜಾವದಿಂದ ನೂರಾರು ವಾಹನಗಳು ನಿಂತಲ್ಲೇ ನಿಂತಿದ್ದವು. ಮಣ್ಣು ತೆರವು ಕಾರ್ಯಾಚರಣೆ ಬಳಿಕ ಸದ್ಯ ವಾಹನಗಳು ಸಂಚರಿಸುತ್ತಿವೆ ಎನ್ನಲಾಗಿದೆ. ಕಳೆದ ವಾರ ಕೂಡ ಅದೇ ಜಾಗದಲ್ಲಿ ಎರಡು ಭಾರೀ ಗುಡ್ಡ ಕುಸಿತವಾಗಿದ್ದು ಸ್ಥಳೀಯರು NHAI ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.

Share This Article
Leave a Comment