ಯುದ್ಧದಿಂದ ಜಗತ್ತಿಗೆ ತೈಲಾತಂಕ: ಎಂಆರ್‌ಪಿಎಲ್‌ಗೆ ಸದ್ಯಕ್ಕೆ ಇಲ್ಲ ಚಿಂತೆ

Prakhara News
2 Min Read

ಮಂಗಳೂರು: ಇರಾನ್- ಅಮೆರಿಕ, ಇಸ್ರೇಲ್ ಯುದ್ಧ ಮುಂದುವರಿಯುವ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದ ಏಕೈಕ ತೈಲ ಸಂಸ್ಕರಣಾಗಾರ ಎಂಆರ್‌ಪಿಎಲ್‌ನಲ್ಲೂ ಸ್ವಲ್ಪ ಮಟ್ಟಿನ ಕಳವಳ ಉಂಟಾಗಿದೆ. ಯುದ್ಧ ಸನ್ನಿವೇಶ ಇನ್ನೂ ಒಂದು ತಿಂಗಳ ಕಾಲ ಇರಬಹುದು ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿರುವುದು ಆತಂಕ ತಂದಿದೆ.

ಮೂಲಗಳು ತಿಳಿಸುವ ಪ್ರಕಾರ ಎಂಆರ್‌ಪಿಎಲ್‌ನಲ್ಲಿ ಸುಮಾರು 10 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಸ್ಕರಣೆಗೆ ಲಭ್ಯವಿದೆ. ಅಲ್ಲದೆ ಪೆರ್ಮುದೆಯಲ್ಲಿರುವ ಐಎಸ್‌ಪಿ ಆರ್‌ಎಲ್‌ನ ಭೂಗತ ತೈಲಾಗಾರ ದಲ್ಲೂ ಸುಮಾರು 53 ಸಾವಿರ ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲ ಸಂಗ್ರಹವಿದೆ. ಅಲ್ಲದೆ ದೇಶಕ್ಕೆ ಕೃಷ್ಣ-ಗೋದಾ ವರಿ ಪಾತ್ರ (ಕೆ.ಜಿ. ಬೇಸಿನ್) ದಿಂದಲೂ ಸ್ವಲ್ಪ ಪ್ರಮಾಣದ ಕಚ್ಚಾ ತೈಲ (ಲೈಟ್) ಲಭ್ಯವಾಗುವ ನಿರೀಕ್ಷೆ ಇದೆ. ಒಂದು ವೇಳೆ ಒಂದು ತಿಂಗಳ ಕಾಲ ಯುದ್ಧ ಮುಂದುವರಿದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಲಿದೆ.

ಸದ್ಯ ಯಾವುದೇ ತೈಲ ಸಾಗಾಟ ಹಡಗುಗಳು ಸಂಚರಿಸುತ್ತಿಲ್ಲ. ಬಹು ತೇಕ ಕಚ್ಚಾತೈಲ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ, ಇರಾನ್, ಇರಾಕ್, ಕತಾರ್, ಬಹ್ರನ್‌ನಿಂದ ಬರುತ್ತದೆ. ಭಾರತ ಆಮದು ಮಾಡಿಕೊಳ್ಳುವ ಮೂರನೇ ಒಂದ ರಷ್ಟು ಕಚ್ಚಾ ತೈಲ ಹೊರ್ಮುಜ್ ಜಲಸಂಧಿಯ ಮೂಲಕ ಬರ ಬೇಕಿವೆ. ಇದನ್ನು ಇರಾನ್ ಈಗಾಗಲೇ ಮುಚ್ಚಿದೆ.

ಇಂತಹ ಬಿಕ್ಕಟ್ಟುಗಳು ಉಂಟಾಗುವ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಭಾರತ ಇತ್ತೀಚೆಗೆ ಕಚ್ಚಾತೈಲಕ್ಕೆ ಒಂದೇ ಮೂಲವನ್ನು ನಂಬದೆ, ಹಲವು ಮೂಲಗಳಿಂದ ಖರೀದಿಸು ತ್ತಿದೆ. ರಷ್ಯ, ಅಮೆರಿಕ, ನೈಜೀರಿಯಾ, ವೆನೆಜುವೆಲಾ ಇತ್ಯಾದಿ ರಾಷ್ಟ್ರಗಳಿಂದ ಕಚ್ಚಾ ತೈಲ ಲಭ್ಯ ವಿದ್ದರೂ ಅವುಗಳ ಸಾಗಾಟ ವೆಚ್ಚ ಅಧಿಕವಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಗಲ್ಫ್ ರಾಷ್ಟ್ರಗಳ ತೈಲ ಸಾಗಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಇತರ ಮೂಲಗಳ ತೈಲದ ದರ ಏರಿಕೆಯಾಗುವ ಭೀತಿಯೂ ತಲೆದೋರಿರುವುದಾಗಿ ಮೂಲಗಳು ತಿಳಿಸಿವೆ.

ಒಂದು ವೇಳೆ ತತ್‌ಕ್ಷಣ ಯುದ್ಧ ನಿಂತರೂ ಮತ್ತೆ ಅವು ತಮ್ಮ ಬಂದರುಗಳಿಗೆ ಹೋಗಿ ತೈಲ ತುಂಬಿಸಿಕೊಂಡು ಹೊರಡುವುದು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನವಮಂಗಳೂರು ಬಂದರಿನ ಅಧಿಕಾರಿಗಳ ಪ್ರಕಾರ ಕೂಡಲೇ ಯುದ್ಧ ಮುಗಿದರೂ ಹಡಗುಗಳ ಸಂಚಾರ ಸಹಜ ಸ್ಥಿತಿಗೆ ಬರುವುದಕ್ಕೆ ಎರಡು ವಾರ ಬೇಕಾಗಬಹುದು. ಯಾಕೆಂದರೆ ಹಡಗುಗಳು ಸರತಿ ಪ್ರಕಾರ ಬಂದರಿನೊಳಗೆ ಬರ ಬೇಕಾಗು ತ್ತದೆ, ಅಲ್ಲಿ ಸೀಮಿತ ಹಡಗುಗಳಿಗೆ ಅವಕಾಶವಿರುವುದು ಒಂದೆಡೆ ಯಾದರೆ ಕಚ್ಚಾ ತೈಲ ತುಂಬಿಸುವುದಕ್ಕೂ ಸಮಯ ತಗಲುತ್ತದೆ. ಸದ್ಯ ನವಮಂಗಳೂರು ಬಂದರಿಗೆ ಬರುವ ಹಡಗು ಗಳಲ್ಲಿ ವ್ಯತ್ಯಯ ಉಂಟಾಗಿಲ್ಲ, ಸೂಯೆಜ್ ಕಾಲುವೆ ಕಾರ್ಯನಿರ್ವಹಿಸುತ್ತಿರುವ ಕಾರಣ ಆಫ್ರಿಕಾ- ಅಮೆರಿಕ ಭಾಗದಿಂದ ಬರುವ ಹಡಗುಗಳು ಎಂದಿನಂತೆ ಸಂಚರಿ ಸುತ್ತಿವೆ.

ಕಲ್ಲಿದ್ದಲು ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾದಿಂದ ಬರುತ್ತಿದೆ. ಖಾದ್ಯತೈಲ ಇಂಡೋನೇಷ್ಯಾ, ಮಲೇಷ್ಯಾದಿಂದ ನೌಕೆಗಳಲ್ಲಿ ಬರುತ್ತಿದೆ. ಕಬ್ಬಿಣದ ಅದಿರು ಚೀನಕ್ಕೆ ಹೋಗುತ್ತಿದೆ. ಮಧ್ಯಪ್ರಾಚ್ಯ ರಾ ಷ್ಟ್ರಗಳಿಗೆ ಸೀಮಿತ ಪ್ರಮಾಣ ದಲ್ಲಿ ಆಗುತ್ತಿದ್ದ ಉತ್ಪನ್ನಗಳ ರಫ್ತು ಈಗ ಸ್ಥಗಿತಗೊಂಡಿದೆ.

Share This Article
Leave a Comment