Home ಕರಾವಳಿ ಉಪ್ಪಿನಂಗಡಿ: ಅಡಿಕೆ ತೋಟದಲ್ಲಿ ಬೆಂಕಿ ಅವಘಡ – 250ಕ್ಕೂ ಹೆಚ್ಚು ಆಡಿಕೆ ಗಿಡಗಳು ಭಸ್ಮ

ಉಪ್ಪಿನಂಗಡಿ: ಅಡಿಕೆ ತೋಟದಲ್ಲಿ ಬೆಂಕಿ ಅವಘಡ – 250ಕ್ಕೂ ಹೆಚ್ಚು ಆಡಿಕೆ ಗಿಡಗಳು ಭಸ್ಮ

0

ಉಪ್ಪಿನಂಗಡಿ: ಅಡಿಕೆ ತೋಟದಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿರುವ ಘಟನೆ ಹಿರೇಬಂಡಾಡಿ ಗ್ರಾಮದ ಪಡ್ಯೊಟ್ಟು ಎಂಬಲ್ಲಿ ನಡೆದಿದೆ.

ಪಡ್ಯೊಟ್ಟು ನಿವಾಸಿ ಯತೀಶ್‌ ಶೆಟ್ಟಿ ಎಂಬವರಿಗೆ ಸೇರಿದ ಸುಮಾರು 1 ಎಕ್ರೆ ಪ್ರದೇಶದಲ್ಲಿನ ಅಡಿಕೆ ತೋಟದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸುಮಾರು 250 ಕ್ಕೂ ಹೆಚ್ಚು ಆಡಿಕೆ ಗಿಡಗಳು ಸುಟ್ಟು ಹೋಗಿದ್ದು ಸಾವಿರಾರು ರೂಪಾಯಿ ನ‌ಷ್ಟ ಸಂಭವಿಸಿದೆ.

ಘಟನೆ ವೇಳೆ ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ಬೆಂಕಿಯನ್ನು ಹತೋಟಿಗೆ ತರಲು ಅಸಾಧ್ಯವಾಗಿದ್ದು, ಬಳಿಕ ಬಂಟ್ವಾಳ ಅಗ್ನಿಶಾಮಕ ದಳದ ಸಹಕಾರದೊಂದಿಗೆ ನಂದಿಸುವಲ್ಲಿ ಸಾಧ್ಯವಾಯಿತು. ವಿದ್ಯುತ್‌ ತಂತಿ ಹಾದು ಹೋಗುತ್ತಿದ್ದು, ಈ ಅವಘಡಕ್ಕೆ ಕಾರಣವೆಂದು ಸ್ಥಳೀಯರು ದೂರಿದರು.

LEAVE A REPLY

Please enter your comment!
Please enter your name here