ಬಂಟ್ವಾಳ: ಸ್ಕೂಟರ್ ಮತ್ತು ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜೀಪಮುನ್ನೂರುನಲ್ಲಿ ಅಪಘಾತ ಸಂಭವಿಸಿದೆ.
ಅಬೂಬಕ್ಕರ್ ಕೋಡಿಜಾಲ್ ಗಾಯಗೊಂಡ ಸ್ಕೂಟರ್ ಸವಾರರಾಗಿದ್ದಾರೆ.
ಅಬೂಬಕ್ಕರ್ ಅವರು ಸ್ಕೂಟರ್ ನಲ್ಲಿ ಬುಧವಾರ ಸಂಜೆ ವೇಳೆ ಮೆಲ್ಕಾರ್ ನಿಂದ ಬರುತ್ತಿದ್ದ ವೇಳೆ ಕಂದೂರು ಎಂಬಲ್ಲಿ ಈ ಅಪಘಡ ಸಂಭವಿಸಿದೆ.
ಅವರು ನರಿಕೊಂಬು ಎಂಬಲ್ಲಿ ಅಡಿಕೆ ತೋಟವೊಂದರ ಅಡಿಕೆಯ ವ್ಯವಹಾರ ಕುದುರಿಸಿದ್ದು, ಅಲ್ಲಿ ಹೋಗಿಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಮುಡಿಪು ಕಡೆಯಿಂದ ನಿರ್ಲಕ್ಷ್ಯತನದಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಪರಿಣಾಮ ಸ್ಕೂಟರ್ ಸವಾರ ಅಬೂಬಕ್ಕರ್ ಕೋಡಿಜಾಲ್ ರವರಿಗೆ ಗಾಯಗಳಾಗಿದೆ.
ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ತಿಳಿದು ಬಂದಿದೆ.