Home ತಾಜಾ ಸುದ್ದಿ ಕುರಿ ಕಾಯುವ ಹುಡುಗ ಹನುಮಂತ ಲಮಾಣಿ ಬಿಗ್ ಬಾಸ್ ವಿನ್ನರ್

ಕುರಿ ಕಾಯುವ ಹುಡುಗ ಹನುಮಂತ ಲಮಾಣಿ ಬಿಗ್ ಬಾಸ್ ವಿನ್ನರ್

0

ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ.ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್  ‘ಬಿಗ್ ಬಾಸ್ ಕನ್ನಡ ಸೀಸನ್‌ 11’ ಗ್ರ್ಯಾಂಡ್ ಫಿನಾಲೆಯಲ್ಲಿ ಕುರಿಗಾಹಿ ಹನುಮಂತ ಲಮಾಣಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ರನ್ನರ್‌ ಅಪ್‌ ಸ್ಥಾನಕ್ಕೆ ತ್ರಿವಿಕ್ರಮ್‌ ತೃಪ್ತಿ ಪಟ್ಟುಕೊಂಡಿದ್ದಾರೆ. ಮೂರನೇ ಸ್ಥಾನ ರಜತ್‌ ಪಾಲಾಗಿದೆ.

ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿಯೇ ಓರ್ವ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿರೋದು ಇದೇ ಮೊದಲು! ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಹನುಮಂತ ಲಮಾಣಿ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಅಂತ ಹನುಮಂತ ಲಮಾಣಿ ತೋರಿಸಿಕೊಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ವಿನ್ನರ್‌ ಆದ ಹನುಮಂತ ಲಮಾಣಿಗೆ ವಿನ್ನರ್ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ರನ್ನರ್‌ ಅಪ್‌ ಆದ ತ್ರಿವಿಕ್ರಮ್‌ಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ.

ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಭರ್ಜರಿ ಜನಪ್ರಿಯತೆ ಗಳಿಸಿರುವ, ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಕುರಿ ಕಾಯುವ ಹುಡುಗ ಹನುಮಂತ ಲಮಾಣಿ. ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಕುರಿಗಾಹಿ ಹನುಮಂತ ಲಮಾಣಿ. ಬಂಜಾರ ಹಾಡುಗಳನ್ನ ಹಾಡೋದ್ರಲ್ಲಿ ಹನುಮಂತ ಲಮಾಣಿ ಎತ್ತಿದ ಕೈ. ‘ಸರಿಗಮಪ ಸೀಸನ್ 15’ ಕಾರ್ಯಕ್ರಮದಲ್ಲಿ ಮೊದಲ ರನ್ನರ್‌ ಅಪ್‌ ಆಗಿದ್ದವರಿವರು. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸಿ ಸೆಮಿ ಫಿನಾಲೆ ಹಂತದವರೆಗೂ ಬಂದಿದ್ದರು. ‘ಭರ್ಜರಿ ಬ್ಯಾಚುಲರ್ಸ್’, ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋಗಳಲ್ಲೂ ಹನುಮಂತ ಸ್ಪರ್ಧಿಸಿದ್ದರು.

LEAVE A REPLY

Please enter your comment!
Please enter your name here