Home ಪ್ರಖರ ವಿಶೇಷ ನಾಳೆಯಿಂದ ಮಂಗಳೂರಿನಲ್ಲಿ ಐಸ್ ಕ್ರೀಮ್ ಪರ್ಬ-2025

ನಾಳೆಯಿಂದ ಮಂಗಳೂರಿನಲ್ಲಿ ಐಸ್ ಕ್ರೀಮ್ ಪರ್ಬ-2025

0

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್ಸ್ಟಾಗ್ರಾಮ್ ಪೇಜ್ ಸಹಭಾಗಿತ್ವದಲ್ಲಿ ಫೆಬ್ರವರಿ 7, 8 ಮತ್ತು 9ರಂದು 3 ದಿನಗಳ ಐಸ್ ಕ್ರೀಮ್ ಪರ್ಬವನ್ನು ಅಯೋಜಿಸಲಾಗಿದೆ.

2ನೇ ಆವ್ರತ್ತಿಯ ಐಸ್ ಕ್ರೀಮ್ ಪರ್ಬ ಇದಾಗಿದ್ದು ಮೂರೂ ದಿನ ಕೂಡ ಬೆಳಗ್ಗೆ 11ರಿಂದ ರಾತ್ರಿ 9 ರವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಕಿರಣ್ ಶೆಣೈ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರನ್ನು ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುವ ಈ ಸಂದರ್ಭದಲ್ಲಿ ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನ ಒಂದೇ ಸೂರಿನಡಿ ಸೇರಿಸಬೇಕು ಅನ್ನುವ ಆಲೋಚನೆ ಆಯೋಜಕರದ್ದು, ಹಾಗಾಗಿ ಈ ಬಾರಿ 14 ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ಭಾಗವಹಿಸುವ ಐಸ್ ಕ್ರೀಮ್ ಸಂಸ್ಥೆಗಳು ಐಡಿಯಲ್ – ಪಬ್ಬಾಸ್ , ಹ್ಯಾಂಗ್ಯೋ, ಮ್ಯಾಂಗೋ ಬೆರ್ರಿಸ್ , ಎಂಚಿ ಕ್ರಂಚಿ – ದಿ ಮಿಲೆಟ್ ಹೌಸ್ , ಸ್ಕೂಪ್ಸೊ , ಕೈಲಾರ್ಸ್ , ಸ್ವಿರ್ಲಿಯೊ , ಎಫ್ 5, ಐಸ್ ಕ್ರೀಮ್ ಆಂಡ್ ಮೋರ್ , ಫ್ರೂಟ್ ಪೊಪ್ಜ್ , ಫ್ಲೇವರ್ಸ್ , ಹೈವ್ ಸ್ಕ್ಯೂಬ್ , ಬೊನ್ ಬೊನ್ಸ್, ಕ್ಯಾಮೆರಿ ಬ್ರಾಂಡ್ ಗಳು ಭಾಗವಹಿಸಲಿದೆ.


2024 ರಲ್ಲಿ ನಡೆದ ಐಸ್ ಕ್ರೀಮ್ ಪರ್ಬದ ಮೊದಲ ಆವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಅತೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದ್ದು, ಸಾಮಾಜಿಕ ಜಾಲತಾಣ ಇನ್ನಾ ಗ್ರಾಮ್ ನಲ್ಲಿ ಟ್ರೈ ತಿಂಡಿ ಚಾನೆಲ್ ಪ್ರಸಾರ ಮಾಡಿದ ವಿಡಿಯೋ 6 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು 50 ಸಾವಿರ ಜನ ಹಂಚಿಕೊಂಡಿದ್ದಾರೆ.


ಫೆಬ್ರವರಿ 7 ರಂದು ಸಂಜೆ 5 ಘಂಟೆಗೆ ಖ್ಯಾತ ಯುಟ್ಯೂಬರ್ ಭಟ್‌ & ಭಟ್‌ ಸಹೋದರರಾದ ಸುದರ್ಶನ್ ಭಟ್ ಮತ್ತು ಮನೋಹರ್ ಭಟ್ ಅವರು ಯುಟ್ಯೂಬ್ ನಲ್ಲಿ 12 ಲಕ್ಷಕ್ಕೂ ಹೆಚ್ಚು ಫಾಲ್ಲೋರ್ಸ್ ಗಳನ್ನೂ ಗಳಿಸಿ ರೆಸಿಪಿ ಕ್ಷೇತ್ರದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ವಿಶೇಷ ಸಾಧನೆಗಾಗಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸನ್ಮಾನ ಕಾರ್ಯಕ್ರಮಕ್ಕೆ ಇಚೈ ಮಂಗಳೂರು ಬ್ರಾಂಚಿನ CA.ಗೌತಮ್ ಪೈ ಉಪಸ್ಥಿತರಿರಲಿದ್ದಾರೆ.

ಜೊತೆಗೆ ಐಸ್ ಕ್ರೀಮ್ ಪರ್ಬದಲ್ಲಿ ಭಾಗವಹಿಸುವ ಐಸ್ ಕ್ರೀಮ್ ಸಂಸ್ಥೆಗಳ ಮಾಲೀಕರು ಕೂಡ ಜೊತೆಯಾಗಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8317489506 ಸಂಪರ್ಕಿಸಬಹುದಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಅಭಿಷೇಕ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here