ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ ಅ21ರಂದು ಬೆಳಿಗ್ಗೆ 10 ಗಂಟೆಗೆ ನಾಗರ ಪಂಚಮಿ ಉತ್ಸವ ನಡೆಯಿತು. ದೈವಸ್ಥಾನದ ನಾಗ ಪ್ರತಿಷ್ಠೆ ಮಂಟಪದ ಬಳಿ ಇರುವ ನಾಗನ ಮೂರ್ತಿಗೆ ಅರ್ಚಕ ರಮೇಶ್ ಪೊದ್ದಾಣ್ಣಾಯ ಹಾಲು,ಸೀಯಾಳ,ಜೇನುತುಪ್ಪ, ಸಕ್ಕರೆ, ಅಭಿಷೇಕ ಮಾಡಿ ಹೂವುಗಳಿಂದ ಶೃಂಗರಿಸಿ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಅದ್ಯಕ್ಷ .ಎಸ್.ಬಿ ಜಯರಾಮ ರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು,ಭಕ್ತಾಧಿಗಳು,ಕುಟುಂಬಸ್ಥರು, ಉತ್ಸವದಲ್ಲಿ ಉಪಸ್ಥಿತರಿದ್ದರು.