Home ಕರಾವಳಿ ಮಂಗಳೂರು: ಮಹಿಳೆಗೆ ಚೂರಿ ತೋರಿಸಿ ಸುಲಿಗೆ : ಆರೋಪಿ ಪೊಲೀಸರ ವಶಕ್ಕೆ

ಮಂಗಳೂರು: ಮಹಿಳೆಗೆ ಚೂರಿ ತೋರಿಸಿ ಸುಲಿಗೆ : ಆರೋಪಿ ಪೊಲೀಸರ ವಶಕ್ಕೆ

0

ಮಂಗಳೂರು: ನಗರದ ನಾಗುರಿ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಚೂರಿಯನ್ನು ತೋರಿಸಿ, ಕೈಯಿಂದ ಹಲ್ಲೆ ಮಾಡಿ, ಶಾಪ್‌ನ ಕ್ಯಾಶ್‌ ಡ್ರಾವರ್‌ ನಲ್ಲಿದ್ದ 19,300 ರೂ. ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಬಂಧಿತ ಆರೋಪಿ ಬೊಂದೇಲ್‌ ಚರ್ಚ್‌ ಹಿಂಭಾಗದ ಪಟ್ರಕೋಡಿ ನಿವಾಸಿ ಸುನೀಲ್‌(31) ಎಂದು ಗುರುತಿಸಲಾಗಿದೆ ‌

ಆರೋಪಿ ಮೆಡಿಕಲ್‌ನಲ್ಲಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಮತ್ತು ಸೊತ್ತು ಪತ್ತೆಗೆ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆತನಿಂದ 17,500 ರೂ. ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್‌ ಹಾಗೂ ಇತರ ಸೊತ್ತುಗಳನ್ನು ಸೇರಿಸಿ ಒಟ್ಟು ರೂ. 1,20,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ. ನಾಗರಾಜ್‌ ಅವರ ನೇತೃತ್ವದಲ್ಲಿ ಪಿ.ಎಸ್‌.ಐ. ವಿನಾಯಕ ಭಾವಿಕಟ್ಟಿ ಹಾಗೂ ಶಿವಕುಮಾರ್‌ ಮತ್ತು ಸಿಬಂದಿಯವರಾದ ಜಯಾನಂದ, ಸಂದೀಪ್‌, ರಾಜೇಸಾಬ್‌, ಗಂಗಾಧರ್‌, ರಾಘವೇಂದ್ರ, ಪ್ರದೀಪ್‌ ಮತ್ತು ದಕ್ಷಿಣ ಉಪ ವಿಭಾಗ ಕಚೇರಿಯ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here