ಮಂಗಳೂರು: ಅನಿಲ್ ಪ್ರವೀಣ್ ಪಿರೇರಾ ಎಂಬ ವ್ಯಕ್ತಿ ಸೆಪ್ಟೆಂಬರ್ 2 ರಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ನಿವಾಸಿ 37 ವರ್ಷದ ಅನಿಲ್ ಪ್ರವೀಣ್ ಪಿರೇರಾ ಎಂದು ಗುರುತಿಸಲಾಗಿದ್ದು, ಇವರು ತರಬೇತಿ ಕೇಂದ್ರದಲ್ಲಿ ಪ್ರಾದೇಶಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಸೆಪ್ಟೆಂಬರ್ 2 ರಂದು, ಪರೀಕ್ಷೆಗೆ ಹಾಜರಾಗಲು ಐದು ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿಗೆ ಪ್ರಯಾಣಿಸುವುದಾಗಿ ಅನಿಲ್ ತನ್ನ ಹೆಂಡತಿಗೆ ತಿಳಿಸಿದ್ದರು. ಸೆಪ್ಟೆಂಬರ್ 3ರಂದು ಪತ್ನಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಶೀಘ್ರದಲ್ಲೇ ಮಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ.ಆದರೆ, ಸೆ.4ರಂದು ಮುಂಜಾನೆ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ಬಿ.ಸಿ.ರೋಡ್‌ನಿಂದ ಕರೆದುಕೊಂಡು ಹೋಗಲು ಹೋದಾಗ, ವಿದ್ಯಾರ್ಥಿಗಳನ್ನು ಬಿ.ಸಿ.ರೋಡಿಗೆ ಇಳಿಸಿ ಅನಿಲ್ ಪ್ರವೀಣ್ ಪಿರೇರಾ ಮಂಗಳೂರಿಗೆ ತೆರಳಿದ್ದರು ಎಂದು ವರದಿಯಾಗಿದೆ.ಪತಿ ಎಲ್ಲಿದ್ದಾನೆ ಎಂದು ಆತಂಕಗೊಂಡ ಅನಿಲ್ ಪತ್ನಿ ಆತನ ಮೊಬೈಲ್ ಫೋನ್‌ಗೆ ಕರೆ ಮಾಡಲು ಪ್ರಯತ್ನಿಸಿದಾಗ ಸ್ವಿಚ್ ಆಫ್ ಆಗಿತ್ತು. ಇದಲ್ಲದೆ, ದಿನ ಕಳೆದರೂ ಅನಿಲ್ ಮನೆಗೆ ವಾಪಾಸಾಗದ ಹಿನ್ನಲೆ , ಪತ್ನಿ, ಅನಿಲ್ ಸ್ನೇಹಿತರು ಮತ್ತು ಸಂಬಂಧಿಕರು ಹುಡುಕಾಟ ಮಾಡಿದ್ರೂ , ಅನಿಲ್ ಪತ್ತೆಯಾಗಿಲ್ಲ.