ಬೆಳ್ತಂಗಡಿ: ಶಿವಮೊಗ್ಗದ ಅವಿವಾಹಿತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ನ ರೂಂನಲ್ಲಿ ನಡೆದಿದೆ.
ಜೂನ್ 26 ರಂದು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಯುವಕ ಕಾರ್ತಿಕ್ (29) ಎಂಬಾತ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದು. ರೂಂ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಪ್ಯಾನ್ ಗೆ ಹಾಕಿ ಪ್ಲಾಸ್ಟಿಕ್ ಚೆಯರ್ ನಲ್ಲಿ ನಿಂತುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಇಂದು ರೂಂ ನಿಂದ ಕಾರ್ತಿಕ್ ಹೊರಬಾರದೆ ಇದ್ದಾಗ ಲಾಡ್ಜ್ ಸಿಬ್ಬಂದಿ ಬಾಗಿಲು ಬಡಿದ್ದಾರೆ. ಆದರೆ ಒಳಗಡೆಯಿಂದ ಮಾತನಾಡದೇ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಅದರಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ಲಾಡ್ಜ್ ಗೆ ತೆರಳಿ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಬೆಳ್ತಂಗಡಿ ಪೊಲೀಸರು ಸಂಪರ್ಕಿಸಿದ್ದು. ಕಾರ್ತಿಕ್ ಮನೆಯವರು ಪೊಲೀಸ್ ಠಾಣೆಗೆ ತಲುಪಲಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.