Home ತಾಜಾ ಸುದ್ದಿ ನಾಳೆಯಿಂದ ಕಡಿಮೆಯಾಗಲಿದೆ ಮದ್ಯದ ದರ: ಪರಿಷ್ಕೃತ ದರದಲ್ಲಿ ಮಾರಾಟಕ್ಕೆ ಸರ್ಕಾರ ಆದೇಶ

ನಾಳೆಯಿಂದ ಕಡಿಮೆಯಾಗಲಿದೆ ಮದ್ಯದ ದರ: ಪರಿಷ್ಕೃತ ದರದಲ್ಲಿ ಮಾರಾಟಕ್ಕೆ ಸರ್ಕಾರ ಆದೇಶ

0

ಬೆಂಗಳೂರು: ನೆರೆ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ.


ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದೆ. ಪರಿಷ್ಕೃತ ದರ ಆಗಸ್ಟ್ 27ರಿಂದಲೇ ಜಾರಿಗೆ ಬರಲಿದೆ.

ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರಾಂಡ್ ಗಳ ದರದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದ್ದು, ಮದ್ಯಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

ಕರಡು ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯಕ್ಕೆ ಭಾರಿ ಕೊರತೆ ಉಂಟಾಗಿತ್ತು. ಸರ್ಕಾರ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್ ಗಳ ಸಂಖ್ಯೆ 18 ರಿಂದ 16ಕ್ಕೆ ಇಳಿಸಲಾಗಿದೆ.

ಮೊದಲ ಮೂರು ಸ್ಲ್ಯಾಬ್ ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲಾಬ್ ಬಳಿಕ 16ನೇ ಸ್ಲ್ಯಾಬ್ ವರೆಗೆ ದರ ಕಡಿಮೆಯಾಗಲಿದೆ. ಆ ಸ್ಲ್ಯಾಬ್ ಗಳಲ್ಲಿನ ವಿಸ್ಕಿ, ರಮ್, ಬ್ರಾಂಡಿಗಳ ಬೆಲೆ ಸಹಜವಾಗಿಯೇ ಕಡಿಮೆಯಾಗಲಿದೆ. ಒಟ್ಟಾರೆ ಮದ್ಯದ ದರ ಕಡಿಮೆಯಾಗಲಿದ್ದು, ಮದ್ಯದ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here