Home ಕರಾವಳಿ ಮಂಗಳೂರು ಸೆಂಟ್ರಲ್ – ಮಡಗಾಂವ್ ಜಂಕ್ಷನ್ ರೈಲು ಸಂಚಾರದಲ್ಲಿ ಅಲ್ಪ ಬದಲಾವಣೆ

ಮಂಗಳೂರು ಸೆಂಟ್ರಲ್ – ಮಡಗಾಂವ್ ಜಂಕ್ಷನ್ ರೈಲು ಸಂಚಾರದಲ್ಲಿ ಅಲ್ಪ ಬದಲಾವಣೆ

0

ಮಂಗಳೂರು: ಆಗಸ್ಟ್ 24ರಿಂದ ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ರೈಲು ನಂ.06602ರ ಸಂಚಾರ ವೇಳೆಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ತೋಕೂರು ಹಾಗೂ ಬಾರ್ಕೂರು ನಡುವೆ ಸಂಚರಿಸುವ ವೇಳೆ ಈ ಬದಲಾವಣೆಯಾಗಲಿದೆ. ತೋಕೂರಿಗೆ ಬೆಳಗ್ಗೆ 6:40ರ ಬದಲು 6:15ಕ್ಕೆ ಆಗಮಿಸುವ ರೈಲು 6:17ಕ್ಕೆ ಅಲ್ಲಿಂದ ನಿರ್ಗಮಿಸಲಿದೆ. ಮುಂದೆ ಸುರತ್ಕಲ್‌ಗೆ 6:27ಕ್ಕೆ ಬಂದು 6:28ಕ್ಕೆ ಮುಲ್ಕಿಗೆ 6:40ಕ್ಕೆ ಬಂದು 6:41ಕ್ಕೆ, ನಂದಿಕೂರಿಗೆ 6:51ಕ್ಕೆ ಬಂದು 6:52ಕ್ಕೆ ಪಡುಬಿದ್ರೆಗೆ 7:02ಕ್ಕೆ ಬಂದು 7:03ಕ್ಕೆ ಇನ್ನಂಜೆಗೆ 7:14ಕ್ಕೆ ಬಂದು 7:15ಕ್ಕೆ ಉಡುಪಿಗೆ 7:30ಕ್ಕೆ ಬಂದು 7:31ಕ್ಕೆ ಹಾಗೂ ಬಾರ್ಕೂರಿಗೆ 7:42ಕ್ಕೆ ಆಗಮಿಸಿ 7:43ಕ್ಕೆ ನಿರ್ಗಮಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.


LEAVE A REPLY

Please enter your comment!
Please enter your name here