Home ತಾಜಾ ಸುದ್ದಿ ಸದನದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಬಿಜೆಪಿ ಶಾಸಕ ಯತ್ನಾಳ್

ಸದನದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಬಿಜೆಪಿ ಶಾಸಕ ಯತ್ನಾಳ್

0

ಬೆಂಗಳೂರು:ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊರ ಹಾಕುವ ವೇಳೆ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರ್‍ ನಲ್ಲಿ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.


ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದು, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಬಿಪಿಯಲ್ಲಿ ಏಳಿರಿಳಿತವಾಗಿ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here