ಮಣಿಪಾಲ : ಮಣಿಪಾಲದ ಸರಳೇ ಬಿಟ್ಟು ಎಂಬಲ್ಲಿ ವಿದ್ಯಾರ್ಥಿಯೋ ರ್ವನಿಗೆ ಆರು ಜನ ಯುವಕರ ತಂಡ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಹೇಳಿದ್ದಾರೆ. ಮಣಿಪಾಲದ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಮಣಿಪಾಲದ ವಿದ್ಯಾರ್ಥಿ ಆರುಷ್ ಕುಮಾರ್ ಎಂಬಾತನಿಗೆ ಸ್ಥಳೀಯ ಆರು ಯುವಕರು ಥಳಿಸಿದ್ದರು. ಬಾರ್ ನಲ್ಲಿ ಮಾತ್ರವಲ್ಲದೆ ಆತನ ಅಪಾರ್ಟ್ಮೆಂಟ್ ಗೂ ಹೋಗಿ ಹಲ್ಲೆ ನಡೆಸಿದ್ದರು.ಈ ಸಂಬಂಧ ಸಿಸಿಟಿವಿ ಫೂಟೇಜ್ ಕೂಡ ವೈರಲ್ ಆಗಿತ್ತು. ಇದೀಗ ಕಾರ್ಯಾಚರಣೆ ನಡೆಸಿರುವ ಮಣಿಪಾಲ ಪೊಲೀಸರು, ಆರು ಮಂದಿ ಯುವಕರನ್ನು ಬಂಧಿಸಿದ್ದು ಅದರಲ್ಲಿ ಓರ್ವ ಮೈನರ್ ಆಗಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.