ಪುತ್ತೂರು ಮೂಲದ ಅಕ್ಷಯ್ ರೈ ದಂಬೆಕಾನರವರು ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಆಯ್ಕೆಯಾಗಿದ್ದಾರೆ. ರಾಜ್ಯ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕರಾದ ಪ್ರಶಾಂತ್ ಮಾಕ್ನೂರುರವರು ಇಂದು ಘೋಷಿಸಿರುತ್ತಾರೆ.
ಕಳೆದ ಹನ್ನೆರಡು ವರ್ಷಗಳ ಕಾಲ ಬಿಜೆಪಿ ಯುವಮೋರ್ಚಾದ ಮಂಡಲ ಜಿಲ್ಲೆ ಹಾಗೂ ರಾಜ್ಯದ ಹಲವಾರು ಜವಬ್ದಾರಿಯನ್ನು ನಿಭಾಯಿಸಿ, ಬೆಂಗಳೂರು ಜಿಲ್ಲೆ ಖಜಾಂಜಿಯಾಗಿ ನಂತರ ರಾಜ್ಯದ ಕಾರ್ಯಕಾರಿಣಿ ಸದಸ್ಯರಾಗಿ ತದನಂತರ ಮಾಧ್ಯಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ತಮಿಳುನಾಡು ರಾಜ್ಯದ ವಿಧಾನ ಸಭಾ ಚುಣಾವಣೆಯ ಸಂದರ್ಭದಲ್ಲಿ ಕನ್ಯಾಕುಮಾರಿ ಜಿಲ್ಲೆಯ ಕೊಲಚ್ಚಿಲ್ ಮತ್ತು ನಾರಗಕೋವಿ ಕ್ಷೇತ್ರಗಳ ಪ್ರಭಾರಿಯಾಗಿ ಕೆಲಸ ಮಾಡಿರುತ್ತಾರೆ. ತದನಂತರ ಹಲವಾರು ಎಂ ಎಲ್ ಎ ಮತ್ತು ಎಂಎಲ್ಸಿ ಚುನಾವಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಪ್ರಭಾರಿಯಾಗಿ ಕೆಲಸ ಮಾಡಿದ್ದು, ಇವರ ಮೇಲೆ ಹಲ್ಲೆ ನಡೆದಿದ್ದು,ಈ ಬಗ್ಗೆ ದಾಖಲಾಗಿತ್ತು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವಾರು ಜವಬ್ಧಾರಿಗಳನ್ನು ನಿಭಾಯಿಸಿಕೊಂಡು ಬಂದಿರುವ ಅಕ್ಷಯ್ ರೈ ದಂಬೆಕಾನರವರಿಗೆ ಈ ಬಾರಿ ವಿಜಯೇಂದ್ರರವರ ಭಾರತೀಯ ಪಕ್ಷದ ತಂಡದಲ್ಲಿ ಉನ್ನತ ಸ್ಥಾನ ದೊರಕಿರುವುದು ಇವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅಕ್ಷಯ್ ರೈ ದಂಬೆಕಾನರವರು ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಇಂದಿನಿಂದ ಕಾರ್ಯನಿರ್ವಹಿಸಲಿದ್ದಾರೆ.