ಕುಪ್ಪೆಪದವು: ಭಾರತೀಯ ಜನತಾ ಪಾರ್ಟಿ ಕೊಳವೂರು 2 ನೇ ವಾರ್ಡಿನ ಬೂತ್ ಸಮಿತಿಯು ಎಡಪದವು ಮಹಾಶಕ್ತಿ ಕೇಂದ್ರದ ಕಚೇರಿಯಲ್ಲಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಜಗದೀಶ್ ದುರ್ಗಾಕೊಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .



ಈ ಸಭೆಯಲ್ಲಿ ಸರ್ವ ಕಾರ್ಯಕರ್ತರ ಸಮ್ಮುಖದಲ್ಲಿ ಕೊಳವೂರು 2 ನೇ ವಾರ್ಡಿನ ಸಮಿತಿ ರಚಿಸಲಾಯಿತು . ಸಮಿತಿಯ ವಾರ್ಡಿನ ಅಧ್ಯಕ್ಷರಾಗಿ ದೀಕ್ಷಿತ್ ಆಚಾರ್ಯ , ಪ್ರಧಾನ ಕಾರ್ಯದರ್ಶಿ ಅಶ್ವಥ್ , ಕಾರ್ಯದರ್ಶಿಯಾಗಿ ರವಿಚಂದ್ರ , ಮತಗಟ್ಟೆ ಏಜೆಂಟ್ ಜಯ ಬಡಕಾಯಿಬೆಟ್ಟು , BLA 2 ರಮೇಶ್ , OBC ಸದಸ್ಯ ಲೋಕೇಶ್ , SC ಮೋರ್ಚಾ ಸದಸ್ಯ ಪ್ರವೀಣ , ST ಮೋರ್ಚಾ ಸದಸ್ಯ ದಾಮೋದರ ನಾಯ್ಕ್ , ಮಹಿಳಾ ಮೋರ್ಚಾದ ಸದಸ್ಯರು ಸುಚಿತ್ರ ಹಾಗೂ ಶಶಿಕಲಾ ಇವರು ಆಯ್ಕೆಯಾದರು .


ಈ ವೇಳೆ ಮಾತನಾಡಿದ ಎಡಪದವು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ನಾವೆಲ್ಲರೂ ಶ್ರಮಿಸಬೇಕಾಗಿದೆ , ಮುಂಬರುವ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬೋಣ ಎಂದರು . ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಮಾತನಾಡಿ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರಾದ ವೈ ಭರತ್ ಶೆಟ್ಟಿ ಹಾಗೂ ಕೊಳವೂರು ಭಾಗದ ಪಂಚಾಯತ್ ಸದಸ್ಯರ ನ ರವಿನಿಂದ ತುಂಬಾ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಅದನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಂತ ಕೆಲಸವನ್ನು ಕಾರ್ಯಕರ್ತರಾದ ನಾವೆಲ್ಲರು ಮಾಡಬೇಕಾಗಿದೆ ಎಂದರು ಸದಸ್ಯರಾದ ಶಶಿಕಲಾ , ಕೊಳವೂರು ಶಕ್ತಿ ಕೇಂದ್ರದ ಪ್ರಮುಖರಾದ ಅಜಯ್ ಅಮೀನ್ , ಸದಾನಂದ ಶೆಟ್ಟಿ , ಉತ್ತರ ಮಂಡಲದ ಉಪಾಧ್ಯಕ್ಷರಾದ ಸಂತೋಷ್ ಕಂಗಿನಡಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಹರ್ಷಿತ್ , ಲೋಕೇಶ್ , ದಿನೇಶ್ ರೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು .