Home ತಾಜಾ ಸುದ್ದಿ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯ ಬಂಧನ

ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯ ಬಂಧನ

0

ಬೆಂಗಳೂರು : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಎಬಿ ವಲಸೆ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಎಬಿ ವಲಸೆ ವಿಭಾಗದ ಅಧಿಕಾರಿಗಳಿಂದ ನೇಪಾಳ ಮೂಲದ ಉತ್ತಮ ಹಾಲಾಲ್ ಎನ್ನುವ ವ್ಯಕ್ತಿಯ ಬಂಧನವಾಗಿದ್ದು ವಶಕ್ಕೆ ಪಡೆದು ಏರ್ಪೋರ್ಟ್ ಪೊಲೀಸರಿಗೆ ಅಧಿಕಾರಿಗಳು ಒಪ್ಪಿಸಿದ್ದಾರೆ.

ಬೆಂಗಳೂರಿನಿಂದ ಬ್ಯಾಂಕಾಕ್ ಗೆ ಉತ್ತಮ ಹಾಲಾಲ್ ತೆರಳುತ್ತಿದ್ದ ಎನ್ನಲಾಗಿದೆ.ಕೇರಳ ಮೂಲದವನು ಎಂದು ನಕಲಿ ಪಾಸ್ಪೋರ್ಟ್ ಪಡೆದಿದ್ದ ಎಂದು ಹೇಳಲಾಗುತ್ತಿದೆ.
ನಕಲಿ ಪಾಸ್ಪೋರ್ಟ್ ಮೂಲಕ ಬ್ಯಾಂಕಾಕ್ ಗೆ ಹಾರಲು ಯತ್ನಿಸಿದ್ದ, ಈ ವೇಳೆ ತನ್ನ ಜೊತೆಯಲ್ಲಿ ಇಬ್ಬರಿಗೆ ಕೆಲಸ ಕೊಡಿಸುವುದಾಗಿ ಕರೆದೊಯ್ಯುತ್ತಿದ್ದ ಎನ್ನಲಾಗುತ್ತಿದೆ.

ಭಾರತ ಹಾಗೂ ನೇಪಾಳ ಮೂಲದ ಇಬ್ಬರು ಮಹಿಳೆಯರನ್ನು ಈ ಸಂದರ್ಭದಲ್ಲಿ ರಕ್ಷಣೆ ಮಾಡಲಾಗಿದೆ.ಇದೇ ವೇಳೆ ಆರೋಪಿ ಒಬ್ಬರಿಂದ 8 ಲಕ್ಷ ಮತ್ತೊಬ್ಬರಿಂದ 1.5 ಲಕ್ಷ ಪಡೆದಿದ್ದ. ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ ಗೆ ತೆರಳು ಯತ್ನಿಸಿದ ವೇಳೆ ಪೊಲೀಸರು ಸೆರೆ ಹಿಡಿದಿದ್ದಾರೆ ಆರೋಪಿಯನ್ನು ಬಂಧಿಸಿ ಆತನ ಜೊತೆ ಬಂದಿದ್ದ ಮತ್ತಿಬ್ಬರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here